Latest

ಕೊರೊನಾ ರಕ್ಷಣಾತ್ಮಕ ಅಸ್ತ್ರ ಎಂದ ಕಾಂಗ್ರೆಸ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಬೇಕಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಕೊರೊನಾ ಸೋಂಕು ಎಂದು ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಕಿಡಿಕಾರಿರುವ ಕಾಂಗ್ರೆಸ್, ಕೊರೊನಾ ಅತ್ಯಾಚಾರ ಆರೋಪಿಯ ರಕ್ಷಣಾತ್ಮಕ ಅಸ್ತ್ರ ಎಂದು ಹೇಳಿದೆ.

ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಕಳ್ಳನೊಬ್ಬ “ನನಗೆ ಕೊರೊನಾ ಬಂದಿದೆ ಮುಟ್ಟಬೇಡಿ” ಎಂದು ಪೊಲೀಸರಿಗೆ ಹೇಳಿದಂತೆ! ಕೊರೊನಾ, ಅತ್ಯಾಚಾರ ಆರೋಪಿಯ ರಕ್ಷಣಾತ್ಮಕ ಅಸ್ತ್ರ ಎನ್ನುವುದು ಸ್ಪಷ್ಟವಾಗಿದೆ. ಸಿಡಿ ಹೇಗೆ ಬಂದಿದೆಯೋ, ಹಾಗೆಯೇ ವಾಪಸ್ ಹೋಗುತ್ತದೆ ಎಂದು ಹೇಳುವ ಸಚಿವರ ಮಾತು ಸಹ ಪ್ರಕರಣವನ್ನು ಮುಚ್ಚಿ ಹಾಕಲು ನಡೆಯುತ್ತಿರುವ ಷಡ್ಯಂತ್ರಗಳ ಪ್ರತಿಬಿಂಬ ಎಂಬುದು ಗೊತ್ತಾಗುತ್ತಿದೆ ಎಂದು ವಾಗ್ದಾಳಿ ನಡೆಸಿದೆ.

ಕಳೆದ ಡಿಸೆಂಬರ್‌ನಿಂದಲೇ ಸಾರಿಗೆ ನೌಕರರು ತಮ್ಮ ಬೇಡಿಕೆಗಳಿಗಾಗಿ ಆಗ್ರಹಿಸುತ್ತಾ ಬಂದಿದ್ದರೂ ಬೇಜವಾಬ್ದಾರಿ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಇಂದು ಮತ್ತೆ ಸಾರ್ವಜನಿಕರು ಪರದಾಡಬೇಕಾಗಿದೆ. ಈ ಸಿಡಿ ಸರ್ಕಾರ ಇಷ್ಟು ದಿನಗಳಲ್ಲಿ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರಲ್ಲಿ ಸೋತಿದೆ ಎಂದು ಟೀಕಿಸಿದೆ.

ರಮೇಶ್ ಜಾರಕಿಹೊಳಿ ಆಸ್ಪತ್ರೆಯಿಂದ ಡಿಸ್ಚಾರ್ಜ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button