Latest

ರಮೇಶ್ ಜಾರಕಿಹೊಳಿಗೆ ಟ್ರ್ಯಾಕ್ ಹಾಕಿದ್ದು ನಿಜ: ಡಿ.ಕೆ.ಶಿವಕುಮಾರ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಡಿ ಲೇಡಿ ಡಿಕೆಶಿ ಭೇಟಿಗೆ ಪ್ರಯತ್ನಿಸಿದ್ದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಯುವತಿ ನಮ್ಮನ್ನು ಭೇಟಿಯಾಗಲು ಪ್ರಯತ್ನಿಸಿರಬಹುದು. ಆದರೆ ಆ ಯುವತಿ ನನ್ನನ್ನು ಭೇಟಿಯಾಗಿಲ್ಲ ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಮ್ಮ ಕಚೇರಿಗೆ ದಿನಕ್ಕೆ ಕಷ್ಟ ಎಂದು ಹಲವರು ಬರುತ್ತಾರೆ. ಅಂತೆಯೇ ಆ ಯುವತಿ ಕೂಡ ಬಂದಿರಬಹುದು. ಆದರೆ ಆಕೆ ನನ್ನನ್ನು ಭೇಟಿಯಾಗಿಲ್ಲ. ಕಷ್ಟ ಎಂದು ಬಂದವರು, ನೊಂದವರು ಪ್ರಾಮಾಣಿಕರಾಗಿದ್ದರೆ ನಾವು ಸಹಾಯಮಾಡುತ್ತೇವೆ ಎಂದರು.

ಸಿಡಿ ಪ್ರಕರಣದ ಬಗ್ಗೆ ನಮಗೆ ಗೊತ್ತಿಲ್ಲ. ಆದರೆ ರಾಜಕೀಯ ವಿಚಾರವಾಗಿ ರಮೇಶ್ ಜಾರಕಿಹೊಳಿ ನಮ್ಮ ಪಕ್ಷದ 5 ಶಾಸಕರನ್ನು ಬೆಳಗಾಗುವುದರಲಿ ಬಿಜೆಪಿಗೆ ಸೆಳೆಯುವುದಾಗಿ ಹೇಳಿಕೆ ನೀಡಿದ್ದರು. ಹಾಗಾಗಿ ನಾವು ಟ್ರ್ಯಾಕ್ ಹಾಕಿದ್ದು ನಿಜ. ನಮ್ಮ ಪಕ್ಷದ ಯಾವ ಶಾಸಕರನ್ನು ಸೆಳೆಯುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಟ್ರ್ಯಾಕ್ ಮಾಡಿದ್ದೆವು. ಅದನ್ನು ನಾವೇ ಅಧಿವೇಶನದಲ್ಲಿ ಹೇಳಿದ್ದೇವೆ. ಅದು ರಾಜಕೀಯ ವಿಚಾರವಾಗಿ ಅಷ್ಟೇ. ಸಿಡಿ ವಿಚಾರ ಅವರ ವೈಯಕ್ತಿಕ ಅದನ್ನು ತಿಳಿದುಕೊಳ್ಳುವ ಅವಶ್ಯಕತೆ ನಮಗಿಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನು ಸಿಡಿ ಕೇಸ್ ನ ಶಂಕಿತ ಆರೋಪಿ, ಮಾಜಿ ಪತ್ರಕರ್ತ ನರೇಶ್ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನರೇಶ್ ನಮಗೆ ಬೇಕಾದ ಹುಡುಗ. ಆತ ಮೀಡಿಯಾದವನು ಹಾಗಾಗಿ ನಮಗೆಲ್ಲ ಮೊದಲಿನಂದಲೂ ಪರಿಚಯದ ವ್ಯಕ್ತಿ, ನಾನು ಹಲವು ಬಾರಿ ಆತನ ಮನೆಗೂ ಭೇಟಿ ನೀಡಿದ್ದೇವೆ. ನಮಗೆ ಕೆಲ ವಿಚಾರ ಆತ ತಿಳಿಸಿದ್ದು, ನಾವು ಆತನಿಂದ ಕೆಲ ವಿಷಯ ಪಡೆದುಕೊಂಡಿದ್ದು ನಿಜ. ಆದರೆ ಅದು ಸಿಡಿ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ.

ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪಕ್ಕೆ ಸಿಡಿ ಲೇಡಿ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button