Latest

ಸಿಡಿ ಯುವತಿ ಮನೆಯಲ್ಲಿ 23 ಲಕ್ಷ ರೂ. ಹಣ ಪತ್ತೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಮನೆಯಲ್ಲಿ 23 ಲಕ್ಷ ರೂಪಾಯಿ ಹಣ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರಿನ ಆರ್.ಟಿ.ನಗರದಲ್ಲಿ ಯುವತಿ ವಾಸವಿದ್ದ ಮನೆಯಲ್ಲಿ ಎಸ್ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆ ಒಟ್ಟು 23 ಲಕ್ಷ ರೂಪಾಯಿ ಹಣ ಮತ್ತು ಮಹತ್ವದ ದಾಖಲೆಗಳು ಪತ್ತೆಯಾಗಿವೆ.

ಕಳೆದ ವಾರವೇ ಎಸ್ ಐಟಿ ಅಧಿಕಾರಿಗಳು ಯುವತಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಮನೆಗೆ ನೋಟೀಸ್ ಅಂಟಿಸಿದ್ದರು. ಆದರೆ ಯುವತಿ ಈವರೆಗೂ ವಿಚಾರಣೆಗೆ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಬರೋಬ್ಬರಿ 23 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ.

ಯುವತಿ ಪತ್ತೆಗೆ ವಿಶೇಷ ತಂಡ; ಜಾರಕಿಹೊಳಿ ಆಗಲೇ ಏಕೆ ದೂರು ನೀಡಲಿಲ್ಲ?

Home add -Advt

ರಮೇಶ್ ಜಾರಕಿಹೊಳಿಯಿಂದ 5 ಕೋಟಿ ರೂ. ಸುಲಿಗೆ ಮಾಡಿತ್ತಾ ಸಿಡಿ ಗ್ಯಾಂಗ್?

Related Articles

Back to top button