Latest

ಸಿಡಿ ಕೇಸ್: ಯುವತಿ ಆ ರೀತಿಯ ಹೇಳಿಕೆಯನ್ನೇ ನೀಡಿಲ್ಲ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಸಿಡಿ ಯುವತಿ ಉಲ್ಟಾ ಹೊಡೆದಿದ್ದಾಳೆ ಎಂಬ ಸುದ್ದಿ ಸುಳ್ಳು. ಆಕೆ ಇಂದು ತನಿಖಾಧಿಕಾರಿಗಳ ಮುಂದೆ ಹೇಳಿಕೆಗಳನ್ನೇ ನೀಡಿಲ್ಲ ಎಂದು ಯುವತಿ ಪರ ವಕೀಲ ಕೆ.ಎನ್.ಜಗದೀಶ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ಜಗದೀಶ್, ಯುವತಿ ಯಾವುದೇ ಉಲ್ಟಾ ಹೇಳಿಕೆ ನೀಡಿಲ್ಲ. ಹೆಚ್ಚಿನ ಸಾಕ್ಷ್ಯ ಒದಗಿಸಲು ಮಾತ್ರ ಎಸ್ ಐಟಿ ಮುಂದೆ ಹಾಜರಾಗಿದ್ದಾಳೆ ಹೊರತು ವಿಚಾರಣೆಗಾಗಿ ಅಲ್ಲ. ಯುವತಿ ಆ ರೀತಿ ಹೇಳಿಕೆ ನೀಡಿಲ್ಲ. ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ಸುಳ್ಳು. ಆರೋಪಿ ಪ್ರಭಾವಿಯಾಗಿರುವುದರಿಂದ ಇಂತ ಸುದ್ದಿ ಹಬ್ಬುತ್ತಿದೆ. ಆದರೆ ಇಂತಹ ಸುದ್ದಿಗಳಿಗೆ ಮಹತ್ವ ನೀಡಬೇಕಿಲ್ಲ ಎಂದು ಹೇಳಿದರು.

ಆರೋಪಿಗಳ ಕಡೆಯವರಿಂದ ಕಪೋಲಕಲ್ಪಿತ ಸುದ್ದಿಗಳನ್ನು ಹರಿಬಿಡಲಾಗುತ್ತಿದೆ ಎಂದು ಇದೆಲ್ಲವೂ ಸುಳ್ಳು ಎಂದು ತಿಳಿಸಿದ್ದಾರೆ.

ಉಲ್ಟಾ ಹೊಡೆದ ಸಿಡಿ ಲೇಡಿ

Home add -Advt

Related Articles

Back to top button