
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದ ಆರೋಪಿಗಳಿಗೆ ಜಾಮೀನು ಸಿಕ್ಕರೂ ಬಂಧನ ಭೀತಿ ಮುಂದುವರೆದಿದೆ.
ಸಿಡಿ ಕಿಂಗ್ ಪಿನ್ ಗಳಾದ ನರೇಶ್ ಹಾಗೂ ಶ್ರವಣ್ ಗೆ ನ್ಯಾಯಾಲಯ ನಿನ್ನೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಆದರೆ ಆರೋಪಿಗಳಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿರುವುದರಿಂದ ಹಾಗೂ ಅಗತಬಿದ್ದರೆ ಬಂಧಿಸಿ ವಿಚಾರಣೆ ನಡೆಸಲು ತನಿಖಾಧಿಕಾರಿಗಳಿಗೆ ಅವಕಾಶವಿರುವುದರಿಂದ ಬಂಧನ ಭೀತಿ ಇನ್ನೂ ಮುಂದುವರೆದಿದೆ.
ಸಿಡಿ ಕಿಂಗ್ ಪಿನ್ ಗಳಾದ ನರೇಶ್ ಹಾಗೂ ಶ್ರವಣ್ ವಿರುದ್ಧ ರಮೇಶ್ ಜಾರಕಿಹೊಳಿ ಹನಿಟ್ರ್ಯಾಪ್, ಬ್ಲ್ಯಾಕ್ ಮೇಲ್ ಆರೋಪದಡಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ಬಹಿರಗವಾದಾಗಿನಿಂದ ತಲೆಮರೆಸಿಕೊಂಡಿದ್ದ ಆರೋಪಿಗಳು ನಿರೀಕ್ಷಣಾ ಜಾಮೀನಿಗಾಗಿ ಕೋರ್ಟ್ ಮೆಟ್ಟಿಲೇರಿದ್ದರು.
‘ಸೋಕಾಲ್ಡ್ ಹುಲಿ, ಬಾಹುಬಲಿ‘ ಮುಖ್ಯಮಂತ್ರಿ ಸೀಟಿನ ಮೇಲೆ ; ಯಡಿಯೂರಪ್ಪನವರ ಸ್ವಯಂಕೃತ ಅಪರಾಧವೇ ದುಸ್ಥಿತಿಗೆ ಕಾರಣ