ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕ್ಷಣಕ್ಕೂ ಕುತೂಹಲ ಮೂಡಿಸುತಿದ್ದು, ಸಿಡಿಯಲ್ಲಿರುವ ಯುವತಿ ದೂರು ದಾಖಲಿಸುವುದಾಗಿ ಹೇಳುತ್ತಿದ್ದಂತೆ ಪ್ರತಿಕ್ರಿಯಿಸಿರುವ ರಮೇಶ್ ಜಾರಕಿಹೊಳಿ, ಯುವತಿ ದೂರು ಕೊಡಲಿ ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಯುವತಿ 3ನೇ ಸಿಡಿ ಬಿಡುಗಡೆ ಮಾಡಿದ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಯುವತಿ ಯಾವ ಕೇಸ್ ದಾಖಲಿಸುತ್ತಾಳೋ ದಾಖಲಿಸಿ. ನನ್ನ ವಿರುದ್ಧ ರೇಪ್ ಕೇಸ್ ದಾಖಲಿಸಿದರೂ ನಾನು ಕಾನೂನಾತ್ಮಕವಾಗಿ ಹೋರಾಟ ನಡೆಸಲು ಸಿದ್ಧನಿದ್ದೇನೆ. ಮುಂದಿನ ನಡೆ ಬಗ್ಗೆ ವಕೀಲರನ್ನು ಭೇಟಿಯಾಗಿ ಚರ್ಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಯುವತಿ ಅಂದೇ ಬಂದು ದೂರು ನೀಡಬೇಕಿತ್ತು. ಈಗ ವಕೀಲರ ಮೂಲಕ ದೂರು ನೀಡಲು ಮುಂದಾಗಿದ್ದಾಳೆ. ನಾನು ಮೊದಲೇ ಹೇಳಿದಂತೆ ಇದೊಂದು ಷಡ್ಯಂತ್ರ. ಯುವತಿ ಯಾವುದೇ ಕೇಸ್ ದಾಖಲಿಸಿದರೂ ಹೋರಾಡಲು ನಾನು ಮಾನಸಿಕವಾಗಿ ಸಿದ್ಧನಿದ್ದೇನೆ ಎಂದರು.
ರಮೇಶ ಜಾರಕಿಹೊಳಿ ವಿರುದ್ಧ ಇಂದೇ ದೂರು: ಸಿಡಿ ಲೇಡಿ ಮತ್ತೊಂದು ವಿಡೀಯೋ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ