Latest

ರಾಸಲೀಲೆ ಸಿಡಿ ಪ್ರಕರಣ; ರಮೇಶ್ ಜಾರಕಿಹೊಳಿ ಪರ ರೇಣುಕಾಚಾರ್ಯ ಬ್ಯಾಟಿಂಗ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿಯನ್ನು ಕೂಡಲೇ ಬಂಧಿಸಬೇಕು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ನಾನು ರಮೇಶ್ ಜಾರಕಿಹೊಳಿ ಪರವಾಗಿ ಮಾತನಾಡುತ್ತಿಲ್ಲ. ಅವರು ತಪ್ಪು ಮಾಡಿದ್ದರೆ ಕ್ಷಮೆಯಾಚಿಸಲಿ, ಶಿಕ್ಷೆ ಅನುಭವಿಸಲಿ ಆದರೆ ರಾಸಲೀಲೆ ಪ್ರಕರಣದ ವಿಡಿಯೋ ರಷ್ಯಾದಲ್ಲಿ ಯೂಟ್ಯೂಬ್ ಗೆ ಅಪ್ ಲೋಡ್ ಆಗುತ್ತದೆ ಎಂದ ಮೇಲೆ ಇದರ ಹಿಂದೆ ದೊಡ್ಡ ಷಡ್ಯಂತ್ರವೇ ನಡೆದಿದೆ. ಈ ನಿಟ್ಟಿನಲ್ಲಿ ಸಮಗ್ರ ತನಿಖೆಯಾಗಬೇಕು ಎಂದರು.

ದೂರು ಸಲ್ಲಿಸಿರುವ ದಿನೇಶ್ ಕಲ್ಲಹಳ್ಳಿಯನ್ನು ಮೊದಲು ಬಂಧಿಸಬೇಕು. ಆತನಿಗೆ ನಾಲ್ಕು ಬಾರಿಸಿದರೆ ಸತ್ಯಾಸತ್ಯತೆ ಹೊರಬರಲಿದೆ. ದೂರು ಕೊಟ್ಟ ವ್ಯಕ್ತಿಗೂ ಹಾಗೂ ವಿಡಿಯೋದಲ್ಲಿದ್ದ ಮಹಿಳೆಗೂ ಏನು ಸಂಬಂಧ? ಆ ವ್ಯಕ್ತಿಗೆ ಸಿಡಿ ಮಾಡಲು ಪ್ರಚೋದನೆ ಕೊಟ್ಟಿದ್ದು ಯಾರು? ಇಡೀ ಪ್ರಕರಣದ ಹಿಂದೆ ದುಡ್ಡು ಚಲ್ಲುತ್ತಿರುವವರು ಯಾರು ಎಂಬುದು ಬಹಿರಂಗವಾಗಬೇಕಿದೆ ಎಂದು ಹೇಳಿದರು.

ವಿಡಿಯೋದಲ್ಲಿನ ಸಂಭಾಷಣೆ ಗಮನಿಸಿದರೆ ಇದೊಂದು ಒಪ್ಪಿತ ಸಂಬಂಧ, ಖಾಸಗಿ ಬದುಕು. ಲೈಂಗಿಕ ಕಿರುಕುಳವಾದಂತೆ ಕಾಣುತ್ತಿಲ್ಲ. ಮಹಿಳೆ ಉದ್ದೇಶಪೂರ್ವಕವಾಗಿ ವಿಡಿಯೋ ಮಾಡಿರುವುದು ಗೊತ್ತಾಗುತ್ತದೆ ಎಂದು ತಿಳಿಸಿದರು.

Home add -Advt

Related Articles

Back to top button