Politics

*ಚುನಾವಣೆಗೆ ಹೋಗುವುದು ಒಳ್ಳೆಯದು ಎಂದ ರಮೇಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರ ಸದ್ಯ ದಿವಾಳಿಯಾಗಿದೆ, ನೈತಿಕತೆ ಇಲ್ಲ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಹೊಸ ಚುನಾವಣೆ ಆಗುವುದು ಒಳ್ಳೆಯದು. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರ ಕಂಟ್ರೋಲ್ ತಪ್ಪಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೋಳಿ ಹೇಳಿದರು.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈಗಿನ ಸರ್ಕಾರವನ್ನು ವಿಸರ್ಜನೆ  ಮಾಡಿ ಚುನಾವಣೆಗೆ ಹೋಗುವುದು ಒಳ್ಳೆಯದು. ಸಿಎಂ ಸಿದ್ದರಾಮಯ್ಯ ಸಿಡಿ ಶಿವುನಿಂದ ಕಂಟ್ರೋಲ್ ತಪ್ಪಿದ್ದಾರೆ ಎಂದರು.

ಬಸನಗೌಡಾ ಪಾಟೀಲ್ ಯತ್ನಾಳ ಕಾಂಗ್ರೆಸ್ ಪಕ್ಷದ ವಿರುದ್ದ ಮಾತಾಡತ್ತಾರೆ. ಯತ್ನಾಳ ಜಾರಕಿಹೋಳಿ ವಿರುದ್ದ ಇಲ್ಲ. ಪಾದಯಾತ್ರೆ ಬಹು ಮುಖ್ಯವಾದದ್ದು ಮುಡಾ ಹಗರಣ, ಒಂದು ಸಮೂದಾಯದ ಹಣ 100% ದುರುಪಯೋಗವಾಗಿದೆ.‌ ಹಣ ಗ್ಯಾರಂಟಿ ಯೋಜನೆಯಲ್ಲಿ ಸರ್ಕಾರ ದುರುಪಯೋಗ ಮಾಡಿದೆ. ಅಪ್ಪ ಮಕ್ಕಳ ಬ್ಲ್ಯಾಕ್ ಮೇಲ್ ಹೋರಗೆ ಬರಬೇಕಾದರೆ  ಹೈಕಂಮಾಡ್ ಗೆ ಮನವಿ ಮಾಡಬೇಕು ಎಂದರು.

ಅಪ್ಪ ಮಕ್ಕಳ ಕಪಿ ಮುಷ್ಟಿಯಿಂದ ಬ್ಲ್ಯಾಕ್ ಮೇಲ್ ಪಕ್ಷ ಹೋರಗೆ ಬರಬೇಕಾದರೆ ಹೈಕಮಾಂಡ್ ಗೆ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳಲು ಮನವಿ ಮಾಡುತ್ತೇವೆ ಎಂದು ಸ್ವಪಕ್ಷದ ವಿರುದ್ದ ಕಿಡಿ ಕಾರಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button