Politics

*ಹಿಂದುಳಿದ ಸಮುದಾಯಕ್ಕೆ ನ್ಯಾಯ ಸಿಗಬೇಕು; ಇಲ್ಲವಾದಲ್ಲಿ ಬಂಡಾಯ ಏಳುತ್ತೇನೆ: ರಮೇಶ್ ಜರಕಿಹೊಳಿ ಎಚ್ಚರಿಕೆ*

2028ರ ಚುನಾವಣೆಯಲ್ಲಿ ಸುಮ್ಮನೆ ಕುಳಿತುಕೊಳ್ಳಲ್ಲ

ಪ್ರಗತಿವಾಹಿನಿ ಸುದ್ದಿ: 2028ರ ವಿಧನಸಭಾ ಚುನಾವಣೆ ವೇಳೆಗೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಲಿ ಬಂಡಾಯವೇಳಲಿದ್ದರಾ? ಇಂತದ್ದೊಂದು ಅನುಮಾನ ಸ್ವತಃ ಅವರ ಹೇಲಿಕೆಯಿಂದಲೇ ಮೂಡುತ್ತಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, 74 ಪರ್ಸೆಂಟ್ ಇರುವ ಹಿಂದುಳಿದ ಸಮುದಾಯಕ್ಕೆ ನ್ಯಾಯ ಸಿಗಬೇಕು ಇಲ್ಲವಾದರೆ ಬಂಡಾಯ ಏಳುತ್ತೇನೆ. ನಾನು ಸುಮ್ಮನೆ ಕುಳಿತುಕೊಳ್ಳುವವನಲ್ಲ ಎಂದಿದ್ದಾರೆ.

2028ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸುಮ್ಮನೆ ಕುಳಿತುಕೊಳ್ಳಲ್ಲ. ನಮ್ಮ ಸರ್ಕಾರವಿರಲಿ, ಬೇರೆ ಸರ್ಕಾರವಿರಲಿ ಬೀಳಿಸುತ್ತೇನೆ ಎಂದು ಗುಡುಗಿದ್ದಾರೆ.

ಕುರುಬರು, ಉಪ್ಪಾರ, ಸುಣಗಾರ ಸಮಾಜದವರು ಅಧಿಕರಕ್ಕೆ ಬರಬೇಕು. ಒಬಿಸಿಗಿಂತ ಎಸ್ ಟಿಗೆ ಹೆಚ್ಚಿನ ಪ್ರಮಾಣ ಬರಬೇಕು ಎಂಬುದು ನನ್ನ ಬೇಡಿಕೆ ಎಂದರು. ನನ್ನ ಜೊತೆ ಕೈ ಜೋಡಿಸಿ ಎಂದು ನಾನು ಸ್ವಾಮೀಜಿಗಳಿಗೆ ಹೇಳಿದ್ದೇನೆ.

ಕಾಂಗ್ರೆಸ್ ನಲ್ಲಿ 5 ಬಾರಿ, ಬಿಜೆಪಿಯಲ್ಲಿ ಎರಡು ಬಾರಿ ಶಾಸಕನಾಗಿದ್ದೇನೆ. ಕಾಂಗ್ರೆಸ್ ಪಕ್ಷ ನನಗೆ ಯಾವುದೇ ರೀತಿ ಕೆಟ್ಟದ್ದನ್ನು ಮಾಡಿಲ್ಲ. ಆದರೆ ಒಬ್ಬ ವ್ಯಕ್ತಿಯಿಂದಾಗಿ ಪಕ್ಷ ಬಿಟ್ಟೆ. ಬಿಜೆಪಿಯಲ್ಲಿ ಬೆಳೆಯುತ್ತಿದ್ದಂತೆ ಎಲ್ಲರೂ ಷಡ್ಯಂತ್ರ ಮಾಡಿದರು ಅದಕ್ಕೂ ನಾನು ಹೆದರಿಲ್ಲ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button