ಪ್ರಗತಿವಾಹಿನಿ ಸುದ್ದಿ, ಗೋಕಾಕ: ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಗೋಕಾಕ ಮತಕ್ಷೇತ್ರದ ಉಪ್ಪಾರಟ್ಟಿ ಗ್ರಾಮದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಶನಿವಾರ ಚಾಲನೆ ನೀಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಂಜನಿಯರಿಂಗ್ ಇಲಾಖೆಯಿಂದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ೧೦ ಕೋಟಿ ರುಪಾಯಿ ವೆಚ್ಚದಲ್ಲಿ ಬೆಟಗೇರಿ-ಮೆಳವಂಕಿ, ಮೆಳವಂಕಿ -ಉಪ್ಪಾರಟ್ಟಿ ಗ್ರಾಮಗಳ ನಡುವಿನ ೧೧.೬೦ ಕಿಮಿ ರಸ್ತೆ ಸುಧಾರಣೆ ಕಾಮಗಾರಿ, ಲೋಕೋಪಯೋಗಿ ಇಲಾಖೆಯಿಂದ ೩.೩೦ ಕೋಟಿ ವೆಚ್ಚದಲ್ಲಿ ಉಪ್ಪಾರಟ್ಟಿ- ಮಮದಾಪೂರ ವರೆಗೆ ಐದು ಕಿಮೀ ರಸ್ತೆ ನಿರ್ಮಾಣ ಕಾಮಗಾರಿ, ಲೋಕೋಪಯೋಗಿ ಇಲಾಖೆಯಿಂದ ೨.೨೦ ಕೋಟಿ ರೂಗಳ ವೆಚ್ಚದಲ್ಲಿ ಪಾರನಟ್ಟಿ ಬೆಣಚಿನಮರಡಿ ಗ್ರಾಮದ ನಡುವಿನ ೩ ಕಿಮಿ ರಸ್ತೆ ಕಾಮಗಾರಿಗೆ ಸಚಿವ ರಮೇಶ ಜಾರಕಿಹೊಳಿ ಅವರು ಚಾಲನೆ ನೀಡಿ ಈ ಗ್ರಾಮಗಳ ಬಹುದಿನಗಳ ಬೇಡಿಕೆ ಈಡೇರಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿನವರ, ಮುಖಂಡರಾದ ಭೀಮಗೌಡ ಪೋಲಿಸಗೌಡರ, ಹನುಮಂತ ದುರ್ಗನ್ನವರ, ವಾಮದೇವ ಜಕಬಾಳ, ಯಲ್ಲಪ್ಪ ಬೂದಿಗೊಪ್ಪ, ರಾಮಣ್ಣ ಕಡಕೋಳ, ರಂಗಪ್ಪ ನಂದಿ, ಹನಮಂತ ಕಿಚಡಿ, ಲಕ್ಕಪ್ಪಾ ಕಡಕೋಳ, ಗುರುಲಿಂಗ ಭಾಗೋಜಿ, ನಾರಾಯಣ ಮೂಡಲಗಿ, ತಿಪ್ಪಣ್ಣಾ ಕಡಕೋಳ, ಸಂತೋ? ಚಿಗದನ್ನವರ, ಶ್ರೀಕಾಂತ್ ಹೊನಕುಪ್ಪಿ, ರಮೇಶ ತಿಗಡಿ, ಶಿವಪುತ್ರ ಜಕಬಾಳ, ಮಹಾದೇವ ಭಂಡಿ, ಕರೆಪ್ಪ ಕೊಳವಿ, ಭೀಮಶಿ ಆಡಿನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಂಜನಿಯರಿಂಗ್ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಎ ಬಿ ಹೊನ್ನಾವರ, ಸಹಾಯಕ ಅಭಿಯಂತರ ಎಸ್ ಎಸ್ ಸಬರದ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಆರ್ ಎ ಗಾಣಿಗೇರ, ಸಹಾಯಕ ಅಭಿಯಂತರ ಸುರೇಶ ಗಸ್ತಿ, ಗುತ್ತಿಗೇದಾರ ಬಸವರಾಜ ದಾಸನವರ ಸೇರಿದಂತೆ ಇತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ