*ದರ್ಶನ್ ಫ್ಯಾನ್ಸ್ ವಿರುದ್ಧ ಕಮಿಷನರ್ ಗೆ ದೂರು ನೀಡಿದ ನಟಿ ರಮ್ಯಾ*

ಪ್ರಗತಿವಾಹಿನಿ ಸುದ್ದಿ: ನಟಿ, ಮಾಜಿ ಸಂಸದೆ ರಮ್ಯಾ ಅವರಿಗೆ ನಟ ದರ್ಶನ್ ಫ್ಯಾನ್ಸ್ ಅಶ್ಲೀಲ ಮೆಸೇಜ್, ಪೋಸ್ಟ್ ವಿಚಾರವಾಗಿ ಕಾನೂನು ಹೋರಾಟಕ್ಕೆ ಮುಂದಾಗಿರುವ ರಮ್ಯಾ, ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ ನಟಿ ರಮ್ಯಾ, ತನಗೆ ಅಶ್ಲೀಲ ಮೆಸೇಜ್ ರವಾನಿಸಿರುವ ದರ್ಶನ್ ಫ್ಯಾನ್ಸ್ ವಿರುದ್ಧ ದೂರು ನೀಡಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲು ನಟಿ ರಮ್ಯಾ ಪೋಸ್ಟ್ ಮಾಡಿದ್ದರು. ಇದಕ್ಕೆ ಆಕ್ರೋಶಗೊಂಡಿದ್ದ ದರ್ಶನ್ ಫ್ಯಾನ್ಸ್ ನಟಿ ರಮ್ಯಾ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ದರ್ಶನ್ ಫ್ಯಾನ್ಸ್ ಹೆಸರಲ್ಲಿ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶೀಲವಾಗಿ ಮೆಸೇಜ್, ಕಮೆಂಟ್ ಕಳುಹಿಸಿದ್ದಾರೆ. ಈ ಬಗ್ಗೆ ನಟಿ ರಮ್ಯಾ ಸೋಷೊಯಲ್ ಮೀಡಿಯಾಗಳಲ್ಲಿ ಸ್ಕ್ರೀನ್ ಶಾಟ್ ಅಪ್ ಲೋಡ್ ಮಾಡುವ ಮೂಲಕ ರೇಣುಕಾಸ್ವಾಮಿಗೂ ದರ್ಶನ್ ಫ್ಯಾನ್ಸ್ ಗೂ ಯಾವುದೇ ವ್ಯತ್ಯಾಸವಿಲ್ಲ. ಅಂದು ರೇಣುಕಾಸ್ವಾಮಿ ಮಾಡಿದ್ದು ತಪ್ಪು ಅಂತಾರೆ. ಅಂದಮೇಲೆ ಈಗ ದರ್ಶನ್ ಫ್ಯಾನ್ಸ್ ಮಾಡುತ್ತಿರುವುದೂ ತಪ್ಪಲ್ಲವೇ? ಇಂತದ್ದರ ವಿರುದ್ಧ ಹೋರಾಟ ನಡೆಸಬೇಕು ಎಂದಿದ್ದಾರೆ.
ನಟಿ ರಮ್ಯಾ ಪರ ರಾಜ್ಯ ಮಹಿಳಾ ಆಯೋಗ ಕೂಡ ನಿಂತಿದ್ದು, ಮಹಿಳ ಅಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಕಮಿಷನರ್ ಗೆ ಪತ್ರ ಬರೆದು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಹಾಗೂ ಈ ಬಗ್ಗೆ ವರದಿ ನೀಡುವಂತೆ ಕೋರಿದ್ದಾರೆ.
ಅಲ್ಲದೇ ರಮ್ಯಾ ದೂರು ನೀಡಿದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.