
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮುಸ್ಲಿಂರ ಪವಿತ್ರ ಹಬ್ಬ ರಂಜಾನ್ ಆಚರಿಸಲು ಕ್ಷಣಗಣನೆ ಶುರು ಆಗಿದ್ದು, ಹಬ್ಬ ಗುರುವಾರವೋ ಅಥವಾ ಶುಕ್ರವಾರವೋ ಎನ್ನುವ ಗೊಂದಲಗಳಿದ್ದು, ಬೆಳಗಾವಿಯಲ್ಲಿ ಗುರುವಾರ ಆಚರಣೆ ಆಗಲಿದೆ.
ಬೆಳಗಾವಿ ನಗರದಲ್ಲಿ ಗುರುವಾರ ಬೆಳಗ್ಗೆ ರಂಜಾನ್ ಈದ್ ಆಚರಿಸಲು ಮುಸ್ಲಿಂ ಮುಖಂಡರು ನಿರ್ಧಾರ ಮಾಡಿದ್ದಾರೆ. ಗುರುವಾರ ಬೆಳಗಾವಿ ನಗರದಲ್ಲಿ ಬೆಳಗ್ಗೆ 9:30ಕ್ಕೆ ರಂಜಾನ್ ಹಬ್ಬದ ಈದ್ ನಮಾಜ್ ನೆರವೇರಿಸಲು ನಿರ್ಧರಿಸಲಾಗಿದ್ದು, ಅಂಜುಮನ್ ಈದ್ಗಾ ಮೈದಾನದಲ್ಲಿ ಸಾಮೂಹಿಕ ನಮಾಜ್ ಪಠಿಸಲಾಗುವುದು ಎಂದು ಅಂಜುಮನ್ ಅಧ್ಯಕ್ಷ ಶಾಸಕ ರಾಜು ಸೇಠ್ ತಿಳಿಸಿದ್ದಾರೆ.
ಅಂಜುಮನ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಗರದ ಮುಫ್ತಿ, ಮೌಲಾನಾ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ