
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಂದು ಪ್ರವಿತ್ರ ರಂಜಾನ್ ಹಬ್ಬದ ಸಡಗರ ನಾಡಿನಾದ್ಯಂತ ಜೋರಾಗಿದ್ದು, ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಾಮೂಹಿಕ ನಮಾಜ್ ಮಾಡಲಾಗಿದೆ.
ಬೆಳಗಾವಿ ನಗರದ ಡಿಸಿ ಕಚೇರಿ ಎದುರು ಇರುವ ಅಂಜುಮನ್ ಇಸ್ಲಾಂ ಕಮೀಟಿಯ ಈದ್ಗಾ ಮೈದಾನದಲ್ಲಿ ಏಕಕಾಲಕ್ಕೆ ಸಾವಿರಾರು ಮುಸ್ಲಿಂರಿಂದ ಸಾಮೂಹಿಕ ನಮಾಜ್ ಮಾಡಲಾಗಿದೆ.
ಅಂಜುಮನ್ ಇಸ್ಲಾಂ ಈದ್ಗಾ ಮೈದಾನದಲ್ಲಿ ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸಾಮೂಹಿಕ ನಮಾಜ್ ನೇರವೇರಿಸಲಾಗಿದೆ.