ರಣಬೀರ್ ಕಪೂರ್ ಚಿತ್ರೀಕರಣ ಸೆಟ್‌ನಲ್ಲಿ ಭಾರೀ ಬೆಂಕಿ ಅವಘಡ

ಪ್ರಗತಿ ವಾಹಿನಿ ಸುದ್ದಿ ಮುಂಬೈ – ಮುಂಬೈನ ಅಂಧೇರಿಯ ಚಿತ್ರಕೂಟ್ ಸ್ಟೂಡಿಯೋದಲ್ಲಿ ರಣಬೀರ್ ಕಪೂರ್ ಮತ್ತು ಶೃದ್ಧಾ ಕಪೂರ್ ಅವರು ಚಿತ್ರೀಕರಣ ನಡೆಸಬೇಕಿದ್ದ ಸೆಟ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ಇನ್ನೂ ಹೆಸರಿಡದ ಚಿತ್ರವೊಂದರ ಹಾಡಿನ ಚಿತ್ರೀಕರಣಕ್ಕಾಗಿ ಈ ಸೆಟ್ ಹಾಕಲಾಗಿತ್ತು. ಆದರೆ ಚಿತ್ರೀಕರಣ ನಡೆಯುತ್ತಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ರಣಬೀರ್ ಹಾಗೂ ಶೃದ್ಧಾ ಮತ್ತು ಹಲವು ಸಹ ಕಲಾವಿದರು ನಟಿಸಲು ಬೃಹತ್ ಸೆಟ್ ಹಾಕಲಾಗಿತ್ತು. ಈ ಚಿತ್ರೀಕರಣದ ಸೆಟ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಸುಮಾರು ೧೦೦೦ ಚದರ ಅಡಿ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿದೆ. ಸ್ಥಳಕ್ಕೆ ಹತ್ತಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಹಾಗೂ ಎರಡು ನೀರಿನ ಟ್ಯಾಂಕ್‌ಗಳು ಧಾವಿಸಿದ್ದು ಬೆಂಕಿ ಆರಿಸುವ ಪ್ರಯತ್ನ ನಡೆಸಿದ್ದಾರೆ.

Home add -Advt

 

ಚಿತ್ರೀಕರಣದ ಸೆಟ್‌ಗೆ ಬೆಂಕಿ ತಗುಲಿದ್ದು ಸ್ಟುಡಿಯೋದ ಹೊರಗೆ ದಟ್ಟವಾದ ಹೊಗೆ ಆವರಿಸಿದ್ದು, ರಣಬೀರ್ ಹಾಗೂ ಶೃದ್ಧಾ ಕಪೂರ್ ಅಭಿಮಾನಗಳಲ್ಲಿ ಆತಂಕ ಮೂಡಿಸಿತ್ತು. ಆದರೆ ಚಿತ್ರೀಕರಣ ನಡೆಯುತ್ತಿರಲಿಲ್ಲ, ಮತ್ತು ಯಾವುದೇ ಜೀವ ಹಾನಿ ಆಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು ಅಭಿಮಾನಿಗಳು ನಿರಾಳರಾಗಿದ್ದಾರೆ.

ಅರ್ಪಿತಾ ಮನೆಯಲ್ಲಿ ರಾಶಿ ರಾಶಿ ಹಣದೊಂದಿಗೆ ಸಿಕ್ಕ ವಸ್ತುಗಳನ್ನು ಕಂಡು ಇಡಿ ಅಧಿಕಾರಿಗಳೇ ಶಾಕ್

https://pragati.taskdun.com/film-and-entertainment/bollywoodalia-bhattpregnantranbir-kapoor/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button