ಪ್ರಗತಿವಾಹಿನಿ ಸುದ್ದಿ, ಮುಂಬೈ: ಅಶ್ಲೀಲತೆಯ ಆರೋಪದ ಮೇಲೆ ತಮ್ಮ ವಿರುದ್ಧ FIR ದಾಖಲಿಸಿದ ಫೋಟೋಗಳಲ್ಲಿ ಒಂದನ್ನು ಮಾರ್ಫ್ ಮಾಡಲಾಗಿದೆ ಎಂದು ರಣವೀರ್ ಸಿಂಗ್ ಮುಂಬೈ ಪೊಲೀಸರಿಗೆ ತಿಳಿಸಿದ್ದಾರೆ.
ತಮ್ಮ ಖಾಸಗಿ ಭಾಗಗಳು ಗೋಚರಿಸುತ್ತಿವೆ ಎಂದು ದೂರುದಾರರು ಆರೋಪಿಸಿರುವ ಛಾಯಾಚಿತ್ರವನ್ನು ಮಾರ್ಫ್ ಮಾಡಲಾಗಿದೆಯೇ ಹೊರತು ಅದು ಪೇಪರ್ ಮ್ಯಾಗಝಿನ್‌ನ ಫೋಟೋಶೂಟ್‌ನ ಭಾಗವಲ್ಲ ಎಂದು ರಣವೀರ್ ಹೇಳಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಪೇಪರ್ ಮ್ಯಾಗಝಿನ್ ಒಂದಕ್ಕಾಗಿ ರಣವೀರ್ ಸಿಂಗ್ ನಗ್ನ ಫೋಟೊ ಶೂಟ್ ಮೂಲಕ ಭಾರಿ ವಿವಾದಕ್ಕೆ ಒಳಗಾಗಿದ್ದರು. ಈ ಕುರಿತು ಕೆಲವರು ದಾಖಲಿಸಿದ ದೂರಿನನ್ವಯ ಮುಂಬೈ ಪೊಲೀಸರು ರಣವೀರ್ ವಿರುದ್ಧ FIR ದಾಖಲಿಸಲಾಗಿತ್ತು.
ರಣವೀರ್ ನಗ್ನಚಿತ್ರಗಳಿಂದ ಮಹಿಳೆಯರ ಭಾವನೆಗೆ ಧಕ್ಕೆ ತಗುಲಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಆ ನಂತರದಲ್ಲಿ ರಣವೀರ್ ನಗ್ನಚಿತ್ರಗಳು ವಿವಾದಕ್ಕೊಳಗಾಗಿ ಪರ- ವಿರೋಧದ ಪ್ರವಾಹವೇ ಜಾಲತಾಣದಲ್ಲಿ ಹರಿದಿತ್ತು.
ಚಡ್ಡಿ, ಪ್ಯಾಂಟು, ಹಾಸಿಗೆ ಮೊಟ್ಟೆ ಎಲ್ಲಾ ತನಿಖೆ ಮಾಡಲಿ; ಸಿಎಂ ಹೇಳಿಕೆಗೆ ಡಿಕೆಶಿ ವ್ಯಂಗ್ಯ
https://pragati.taskdun.com/latest/woman-arrested-abusive-facebook-commentsdevendra-fadnaviss-wifeamrita-fudnavis/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ