Latest

ಅತ್ಯಾಚಾರಿಗಳಿಂದ ಪಾರಾಗಲು ಶಾಲಾ ಕಟ್ಟಡದಿಂದ ಜಿಗಿದ ಬಾಲಕಿ

ಪ್ರಗತಿವಾಹಿನಿ ಸುದ್ದಿ, ಜಯಪುರ: ಅತ್ಯಾಚಾರಕ್ಕೆ ಯತ್ನಿಸಿದ ಐದು ಜನರ ತಂಡದಿಂದ ಪಾರಾಗಲು ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ಶಾಲಾ ಕಟ್ಟಡದಿಂದ ಜಿಗಿದು ಗಂಭೀರ ಗಾಯಗೊಂಡಿದ್ದಾಳೆ.

ಈ ಘಟನೆ ಓಡಿಶಾ ರಾಜ್ಯದ ಜಯಪುರ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿಯನ್ನು ಕಳಿಂಗ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.

Home add -Advt

ಭೀಕರ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡ ಹಿನ್ನೆಲೆಯಲ್ಲಿ ಬಾಲಕಿ ಹಾಗೂ ಆಕೆಯ ಸಹೋದರನಿಗೆ ಶಾಲೆಯಲ್ಲೇ ಆಶ್ರಯ ಪಡೆಯುವಂತೆ ತಿಳಿಸಲಾಗಿತ್ತು. ಹೀಗಾಗಿ ಇಬ್ಬರೂ ಶಾಲೆಯಲ್ಲಿ ಆಶ್ರಯ ಪಡೆದಿದ್ದರು. ಇವರು ಆಶ್ರಯ ಪಡೆದಿರುವ ವಿಷಯ ತಿಳಿದ ಐವರ ಗುಂಪು ತಡರಾತ್ರಿ ಶಾಲೆಗೆ ಬಂದು ಬಾಲಕಿಯ ಸಹೋದರನನ್ನು ಥಳಿಸಿದರು.

ಈ ವೇಳೆ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಬೆನ್ನಟ್ಟಿಕೊಂಡು ಬಂದ ಗುಂಪಿನಿಂದ ತಪ್ಪಿಸಿಕೊಳ್ಳಲು ಆಕೆ ಶಾಲೆಯ ಛಾವಣಿ ಮೇಲೆ ಹೋದಾಗ ಗುಂಪು ಅಲ್ಲೂ ತಲುಪಿದ ಹಿನ್ನೆಲೆಯಲ್ಲಿ ಬಾಲಕಿ ಛಾವಣಿಯಿಂದ ಕೆಳ ಜಿಗಿದು ಗಂಭೀರ ಗಾಯಗೊಂಡಳು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿ ಸಹೋದರ ನೀಸಿದ ದೂರಿನನ್ವಯ ಐವರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಕಳಿಂಗನಗರ ಪೊಲೀಸ್ ಠಾಣೆ ಐಐಸಿ ಪಿ.ಬಿ. ರಾವುತ್ ತಿಳಿಸಿದ್ದಾರೆ.

ಗಿಣಿ ಹುಡುಕಿಕೊಟ್ಟವರಿಗೆ 50,000 ರೂಪಾಯಿ ಬಹುಮಾನ

 

Related Articles

Back to top button