National

*ತಂದೆಯಿಂದಲೇ ಮಗಳ ಮೇಲೆ ಹಾಗೂ ಸೊಸೆಯ ಮೇಲೆ ಅತ್ಯಾಚಾರ*

ಪ್ರಗತಿವಾಹಿನಿ ಸುದ್ದಿ: ಪೆರೋಲ್ ಮೇಲೆ ಹೊರಬಂದಿದ್ದ 36 ವರ್ಷದ ಅತ್ಯಾಚಾರ ಆರೋಪಿ ತನ್ನ 11 ವರ್ಷದ ಸ್ವಂತ ಮಗಳು ಮತ್ತು 12 ವರ್ಷದ ಸೊಸೆಯ ಮೇಲೆ ಅತ್ಯಾಚಾರವೆಸಗಿ ಹೀನ ಕೃತ್ಯವೆಸಗಿದ್ದಾನೆ. ಈ ಘಟನೆ ಛತ್ತೀಸ್‌ಗಢನ ಕೊರಿಯಾ ಜಿಲ್ಲೆಯಲ್ಲಿ ನಡೆಸಿದೆ

ಈ ಆರೋಪಿಗೆ ಈಗಾಗಲೇ ಕ್ರಿಮಿನಲ್‌ ಹಿನ್ನಲೆಯಿದ್ದು, ಈ ಹಿಂದೆಯೂ ಅತ್ಯಾಚಾರ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆ ಎಂದು ಹಾಗೂ ಈತನ ವಿರುದ್ಧ ರೌಡಿ ಶೀಟ‌ರ್ ಕೂಡ ಓಪನ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Home add -Advt

ಅತ್ಯಾಚಾರ ಪ್ರಕರಣದಲ್ಲಿ ಜೈಲಿನಲ್ಲಿದ್ದ ಈತ ಅಕ್ಟೋಬರ್ 19 ರಂದು ಪೆರೋಲ್ ಮೇಲೆ ಹೊರಬಂದವನೇ, ಮನೆಯಲ್ಲಿ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಈತನ ಮಗಳು ಮಗಳು ಪೊಲೀಸರಿಗೆ ತಿಳಿಸಿದ್ದಾಳೆ.

Related Articles

Back to top button