
ಪ್ರಗತಿವಾಹಿನಿ ಸುದ್ದಿ: ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಕಿಡಿಕಾರಿದ್ದಾರೆ. ಬೇರೆ ಭಾಶೆಯಲ್ಲಿ ಅವಕಾಶ ಸಿಗುತ್ತಿದೆ ಎಂದು ಕನ್ನಡದವರಾಗಿ ಕನ್ನಡ ನಾಡನ್ನೇ ಮರೆತರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ರಶ್ಮಿಕಾ ಮಂದಣ್ಣ ಆಂಧ್ರ ಕಾರ್ಯಕ್ರಮದಲ್ಲಿ ಮಾತನಾಡಿದ್ದನ್ನು ನಾನು ನೋಡಿದ್ದೇನೆ. ನಾನು ತೆಲುಗಿನ ಆಂಧ್ರಪ್ರದೇಶದವಳು ಎಂದಿದ್ದಾರೆ. ಕೊಡಗಿನ ರಶ್ಮಿಕಾ ಮಂದಣ್ಣ ಅಪ್ಪಟ ಕನ್ನಡದ ಹೆಣ್ಣುಮಗಳು. ಇಲ್ಲಿ ಬೆಳೆದು ಬೇರೆ ಭಾಷೆಗಳ ಸಿನಿಮಾದಲ್ಲಿ ಅವಕಾಶ ಸಿಕ್ಕುತ್ತಿದೆ ಎಂದು ಅಲ್ಲಿ ಅಭಿನಯಿಸುತ್ತಿರುವ ಮಾತ್ರಕ್ಕೆ ಕನ್ನಡ ನಾಡನ್ನೇ ಮರೆತರೆ ಹೇಗೆ? ನೀವೆಂತಹ ಮೀರ್ ಸಾಧಿಕ್ ಎನಿಸುತ್ತದೆ ಎಂದು ಗುಡುಗಿದ್ದಾರೆ.
ನೀವೆಷ್ಟೇ ದೊಡ್ಡ ವ್ಯಕ್ತಿಗಳಾದರೂ ಈ ನೆಲದ ಋಣ ಮರೆಯಬಾರದು. ಇನ್ನಾದರೂ ಕುವೆಂಪು ಹೇಳಿದ ಮಾತು ಅರ್ಥಮಾಡಿಕೊಳ್ಳಿ. ‘ಎಲ್ಲೇ ಇರು, ಹೇಗೆ ಇರು ಎಂದೆಂದಿಗೂ ಕನ್ನಡವಾಗಿರು’ ಎಂದು ಹೇಳಿದ್ದಾರೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ