ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ರೋಗಿಯೊಬ್ಬರಿಗೆ ಇಲಿ ಕಚ್ಚಿದ ಕಾರಣಕ್ಕೆ ಇಬ್ಬರು ವೈದ್ಯರು ಕೆಲಸದಿಂದ ಅಮಾನತ್ತಾಗಿರುವ ಘಟನೆ ತೆಲಂಗಾಣದ ವಾರಂಗಲ್ ಮಹಾತ್ಮಾ ಗಂಧಿ ಮೆಮೋರಿಯಲ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಆಸ್ಪತ್ರೆಯ ರೆಸ್ಪಿರೇಟರಿ ಇಂಟರ್ ಮೀಡಿಯೇಟ್ ಕೇರ್ ಘಟಕದಲ್ಲಿ ದಾಖಲಾಗಿದ್ದ ರೋಗಿಯೊಬ್ಬರಿಗೆ ಇಲಿ ಕಚ್ಚಿದ ಪರಿಣಾಮ ಇದು ವೈದ್ಯರ ನಿರ್ಲಕ್ಷ್ಯ ಎಂದು ಪರಿಗಣಿಸಿ ಇಬ್ಬರು ವೈದ್ಯರನ್ನು ಸಸ್ಪೆಂಡ್ ಮಾಡಲಾಗಿದೆ.
ಶ್ವಾಸಕೋಶ ಹಾಗೂ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ 38 ವರ್ಷದ ಶ್ರೀನಿವಾಸ್. ಮಾರ್ಚ್ 26ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀನಿವಾಸ್ ಗೆ ಇಲಿಗಳು ಕಚ್ಚಿ ಕೈ, ಕಾಲುಗಳ ಮೇಲೆ ಗಂಭೀರ ಸ್ವರೂಪದ ಗಾಯಗಳನ್ನು ಮಾಡಿದ್ದವು. ರೆಸ್ಪಿರೇಟರಿ ಇಂಟರ್ ಮೀಡಿಯೇಟ್ ಕೇರ್ ಘಟಕದಲ್ಲಿ ಇಲಿಗಳು ಹೆಚ್ಚುತ್ತಿದ್ದು, ರೋಗಿಗೆ ಕಚ್ಚಿ ಗಾಯಗೊಳಿಸಿದ್ದಾಗಿ ಆರೈಕೆ ಮಾಡುವವರು, ಕುಟುಂಬಸ್ಥರು ಆರೋಪಿಸಿದ್ದರು.
ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳಿಗೆ ಇಲಿ ಕಡಿದ ವಿಚಾರ ಭಾರಿ ಸುದ್ದಿಗೆ ಕಾರಣವಾಗಿದ್ದು, ತೆಲಂಗಾಣ ಸರ್ಕಾರ ಆಸ್ಪತ್ರೆಯ ವ್ಯವಸ್ಥಾಪಕ ಬಿ.ಶ್ರೀನಿವಾಸ್ ರಾವ್ ಅವರನ್ನು ವರ್ಗಾವಣೆ ಮಾಡಿ, ರೆಸ್ಪಿರೇಟರಿ ಇಂಟರ್ ಮೀಡಿಯೇಟ್ ಕೇರ್ ಘಟಕದ ಇಬ್ಬರು ವೈದ್ಯರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
150 ಸ್ಥಾನ ಗೆಲ್ಲಲೇಬೇಕು; ಕಾಂಗ್ರೆಸ್ ನಾಯಕರಿಗೆ ಟಾರ್ಗೆಟ್ ನೀಡಿದ ರಾಹುಲ್ ಗಾಂಧಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ