Latest

*ದಸರಾ ಸಂದರ್ಭದಲ್ಲೇ ರೇವ್ ಪಾರ್ಟಿ: 50 ಯುವಕರು ಪೊಲೀಸ್ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ: ಅರಮನೆ ನಗರಿ ಮೈಸೂರಿನಲ್ಲಿ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ದಸರಾ ಹಬ್ಬಕ್ಕೆ ಇನ್ನೇನು ಕೆಲ ದಿನಗಳು ಬಾಕಿ ಇದೆ. ಇಂತಹ ಹೊತ್ತಲ್ಲೇ ಮೈಸೂರಿನಲ್ಲಿ ರೇವ್ ಪಾರ್ಟಿ ನಡೆದಿದೆ.

ಮೈಸೂರು ಹೊರವಲಯದಲ್ಲಿ ಕೆ.ಆರ್.ಎಸ್ ಹಿನ್ನೀರಿನ ಖಾಸಗಿ ಜಮೀನಿನಲ್ಲಿ ತಡರಾತ್ರಿ ರೇವ್ ಪಾರ್ಟಿ ನಡೆದಿದೆ ಎಂದು ತಿಳಿದುಬಂದಿದೆ. ರಾತ್ರಿ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. 150ಕ್ಕೂ ಹೆಚ್ಚು ಯುವಕ-ಯುವತಿಯರು ಪಾರ್ಟಿಯಲ್ಲಿ ಭಾಗಿಯಾಗಿದ್ದರು.

Related Articles

ಇಸ್ರೇಲ್ ನಿಂದ ರ್ಯಾಪರ್ ಒಬ್ಬರನ್ನು ಕರೆಸಲಾಗಿತ್ತು. ಪಾರ್ಟಿಯಲ್ಲಿ ಭಾಗಿಯಾಗಿದ್ದವರಿಂದ ತಲಾ 2000 ರೂಪಾಯಿ ಸಂಗ್ರಹಿಸಲಾಗಿತ್ತು. ಈ ವೇಳೆ ಪೊಲೀಸರು ದಾಳಿ ನಡೆಸಿದ್ದು, 50 ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೈಸೂರಿನಲ್ಲು ರೇವ್ ಪಾರ್ಟಿ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ ಪಿ ವಿಷ್ಣುವರ್ಧನ್, ತಡರಾತ್ರಿ ಮೈಸೂರು ಹೊರವಲಯದಲ್ಲಿ ನಡೆಯುತ್ತಿದ್ದ ಪಾರ್ಟಿ ಮೇಲೆ ನಮ್ಮ ಸಿಬ್ಬಂದಿಗಳು ದಾಳಿ ನದೆಸಿ, 50 ಜನರನ್ನು ವಶಕ್ಕೆ ಪಡೆದಿದ್ದಾರೆ. ಪಾರ್ಟಿಯಲ್ಲಿ ಮದ್ಯ, ಸಿಗರೇಟ್ ನಂತಹ ವಸ್ತುಗಳು ಇದ್ದವು, ಬೇರೆ ಯಾವುದೇ ಮಾದಕ ವಸ್ತುಗಳು ಪತ್ತೆಯಾಗಿಲ್ಲ. ಮಾದಕ ವಸ್ತು ಸೇವನೆ ಬಗ್ಗೆ ವಶಕ್ಕೆ ಪಡೆದವರ ರಕ್ತದ ಮಾದರಿ ವರದಿ ಬಳಿಕ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.

Home add -Advt


Related Articles

Back to top button