Latest

ರೈಲ್ವೆ ನಿಲ್ದಾಣದಲ್ಲಿ ಸ್ಫೋಟ; 6 ಸಿಆರ್ ಪಿ ಎಫ್ ಯೋಧರಿಗೆ ಗಾಯ

ಪ್ರಗತಿವಾಹಿನಿ ಸುದ್ದಿ; ರಾಯ್ಪುರ: ರೈಲ್ವೆ ಸ್ಟೇಷನ್ ನಲ್ಲಿಯೇ ಸ್ಫೋಟ ಸಂಭವಿಸಿದ ಪರಿಣಾಮ ಸಿಆರ್ ಪಿಎಫ್ ನ 6 ಯೋಧರು ತೀವ್ರವಾಗಿ ಗಾಯಗೊಂಡಿರುವ ಘಟನೆ ಛತ್ತೀಸ್ ಗಢದ ರಾಯ್ಪುರದಲ್ಲಿ ನಡೆದಿದೆ.

ರೈಲ್ವೆ ನಿಲ್ದಾಣದಲ್ಲಿ ಇದ್ದ ಸಿಆರ್ ಪಿ ಎಫ್ ವಿಶೇಷ ರೈಲಿನಲ್ಲಿ ಇಗ್ನಿಟರ್ ಸೆಟ್ ಇರುವ ಪೆಟ್ಟಿಗೆಯೊಂದು ಕೆಳಗೆ ಬಿದ್ದ ನಂತರ ಈ ಸ್ಫೋಟ ಸಂಭವಿಸಿದೆ. ಇಗ್ನಿಟರ್ ಸೆಟ್ ಇರುವ ಪೆಟ್ಟಿಗೆಯನ್ನು ಒಂದು ಬೋಗಿಯಿಂದ ಮತ್ತೊಂದು ಬೋಗಿಗೆ ಸಾಗಿಸಲಾಗುತ್ತಿತ್ತು. ಈ ವೇಳೆ ಪೆಟ್ಟಿಗೆ ಕೆಳಗೆ ಬಿದ್ದು ಸ್ಫೋಟ ಸಂಭವಿಸಿದೆ.

ಸ್ಫೋಟದಲ್ಲಿ ಗಾಯಗೊಂಡಿರುವ 6 ಜನ ಸಿಆರ್ ಪಿಎಫ್ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಯ್ಪುರ ಪೊಲೀಸರು ತಿಳಿಸಿದ್ದಾರೆ.
100 ಕ್ಷೇತ್ರಗಳಿಗೆ ಬಿಜೆಪಿ ಹೊಸ ಮುಖ: ಯಾರಿಗೆ ತಪ್ಪಲಿದೆ ಈ ಬಾರಿ ಟಿಕೆಟ್?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button