ಪ್ರಗತಿವಾಹಿನಿ ಸುದ್ದಿ; ನವದೆಹಲಿ: ವಿಶ್ವದ ಆರ್ಥಿಕತೆ 9 ಟ್ರಿಲಿಯನ್ ಡಾಲರನಷ್ಟು ಕುಸಿತ ಕಂಡಿದ್ದು, ಭಾರತದ ಆರ್ಥಿಕತೆ ಸಧ್ಯ ಶೇ.1.9ರಷ್ಟಿದೆ ಕಳೆದ 4 ತಿಂಗಳುಗಳಿಂದ ಉತ್ಪಾದನೆ ತೀವ್ರವಾಗಿ ಕಡಿಮೆಯಾಗಿದೆ ಎಂದು ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಕ್ತಿಕಾಂತ್ ದಾಸ್, ಕೊರೊನಾ ವಿರುದ್ಧ ಹೋರಾಡಲು ಬ್ಯಾಂಕ್ ಗಳಿಗೆ ಶೇ.60ರಷ್ಟು ಹೆಚ್ಚುವರಿ ಹಣ ನೀಡಲಾಗುತ್ತಿದೆ. ರಾಜ್ಯಗಳ ಯಾವುದೇ ಬ್ಯಾಂಕ್ ಗಳಲ್ಲಿ ಹಣದ ಕೊರತೆ ಆಗಿಲ್ಲ. ಬ್ಯಾಂಕ್ ಗಳಿಗೆ ಹೆಚ್ಚುವರಿ ಹಣ ನೀಡಲಾಗುತ್ತಿದೆ. ಬ್ಯಾಂಕ್ ಗಳಿಗೆ ಹೊಸದಾಗಿ ಕರೆನ್ಸಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ದೇಶದ ಆರ್ಥಿಕತೆಯ ಪುನರುಜ್ಜೀವನಕ್ಕೆ ಕೆಲ್ ಅಂಶಗಳನ್ನು ಘೋಷಿಸಲಾಗಿದ್ದು, ನಬಾರ್ಡ್ ಗೆ 25 ಸಾವಿರ ಕೋಟಿ ನೀಡಲಾಗುತ್ತದೆ. ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಗೆ 10 ಸಾವಿರ ಕೋಟಿ ರೂ, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಮಂಡಳಿಗೆ 15 ಸಾವಿರ ಕೋಟಿ ರೂ ನೀಡಾಲಾಗಿದೆ. ಸಣ್ಣ ಮಧ್ಯಮ ಸಂಸ್ಥೆಗಳಿಗೆ 50 ಸಾವಿರ ಕೋಟಿ ರೂ ನೀಡಲಾಗುವುದು ಎಂದರು.
ರಿಸರ್ವ್ ರೆಪೋ ದರ ಶೇ. 3.75ಕ್ಕೆ ಇಳಿಕೆ. ಬ್ಯಾಂಕ್ ಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ. ರಿಸರ್ವ್ ರೆಪೋ ದರ ಪಾಯಿಂಟ್ 25ರಷ್ಟು ಕಡಿತ. ಇನ್ನು ಬ್ಯಾಂಕ್ ಗಳು ಲಾಭಾಂಶ ಘೋಷಿಸುವ ಅಗತ್ಯವಿಲ್ಲ. 1930ರಲ್ಲಿ ಇಂತಹ ಆರ್ಥಿಕ ಕುಸಿತವಾಗಿತ್ತು. ಅದಾದ ಬಳಿಕ ಈಗ ಈ ರೀತಿಯ ಸ್ಥಿತಿ ಬಂದಿದೆ. 2021-22ರ ವೇಳೆಗೆ ಭಾರತದ ಜಿಡಿಪಿ ಶೇ.7.4ರಷ್ಟು ಬೆಳವಣಿಗೆಯಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ