
ಪ್ರಗತಿವಾಹಿನಿ ಸುದ್ದಿ; ಮುಂಬೈ; 100 ರೂಪಾಯಿ ಮುಖಬೆಲೆಯ ಹಳೇಯ ನೋಟುಗಳನ್ನು ಹಿಂಪಡೆಯಲು ಆರ್ ಬಿಐ ನಿರ್ಧರಿಸಿದೆ. ಒಂದು ವೇಳೆ ಹಳೇ ನೂರು ರೂಪಾಯಿ ನೋಟುಗಳು ನಿಮ್ಮ ಬಳಿ ಇದ್ದರೆ ಅವುಗಳನ್ನು ಬ್ಯಾಂಕ್ ಗಳಿಗೆ ನೀಡುವಂತೆ ಸೂಚನೆ ನೀಡಿದೆ.
ಈಗಾಗಲೇ 100 ರೂಪಾಯಿ ಹೊಸ ನೋಟುಗಳನ್ನು ಬಿಡುಗಡೆ ಮಾಡಲಾಗಿರುವ ಹಿನ್ನೆಲೆಯಲ್ಲಿ ಹಳೇ ನೋಟುಗಳನ್ನು ಹಿಂಪಡೆಯಲು ತೀರ್ಮಾನಿಸಿದೆ. ಮಾರ್ಚ್ 31ರ ವರೆಗೆ 100 ರೂಪಾಯಿ ಹಳೇ ನೋಟುಗಳನ್ನು ಬ್ಯಾಂಕ್ ಗಳಿಗೆ ವಾಪಸ್ ನೀಡಲು ಅವಕಾಶವಿದೆ ಎಂದು ರಿಸರ್ವ್ ಬ್ಯಾಂಕ್ ಅಧಿಕಾರಿ ಬಿ.ಮಹೇಶ್ ಮಾಹಿತಿ ನೀಡಿದ್ದಾರೆ.
ಹಳೇ 100 ರೂಪಾಯಿ ಖೋಟಾ ನೋಟುಗಳು ಹೆಚ್ಚಾಗಿವೆ. ಹೀಗಾಗಿ ಹಳೇ ನೋಟುಗಳನ್ನು ಹಿಂಪಡೆಯಲಾಗುತ್ತಿದ್ದು, ಇದು ರೂಪಾಯಿ ಅಪಮೌಲ್ಯವಲ್ಲ ಎಂದು ತಿಳಿಸಿದ್ದಾರೆ.