ಪ್ರಗತಿವಾಹಿನಿ ಸುದ್ದಿ; ಮುಂಬೈ: ರಷ್ಯಾ-ಉಕ್ರೇನ್ ಯುದ್ಧ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಎರಡನೆ ಬಾರಿಗೆ ರೆಪೋ ದರವನ್ನು ಏರಿಕೆ ಮಾಡಿದೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ರೆಪೋ ರೇಟ್ ಶೇ.4.9ರಷ್ಟು ಹೆಚ್ಚಳ ಮಾಡಲಾಗಿದೆ. 50ರಷ್ಟು ಬೆಸಿಸ್ ಪಾಂಟ್ ಆಧಾರದ ಮೇಲೆ ರೆಪೋದರ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ರಷ್ಯಾ ಹಾಗೂ ಉಕ್ರೇನ್ ಯುದ್ಧದಿಂದಾಗಿ ಹಣದುಬ್ಬರ ಹೆಚ್ಚಾಗಿದೆ. ಹಾಗಾಗಿ ರೆಪೋ ದರ ಏರಿಕೆ ಮಾಡಲಾಗಿದೆ. ರೆಪೋ ರೇಟ್ ಏರಿಕೆಯಿಂದಾಗಿ ಬ್ಯಾಂಕ್ ಸಾಲದ ಬಡ್ಡಿದರ ಕೂಡ ಏರಿಕೆಯಾಗಲಿದೆ ಎಂದು ಹೇಳಿದರು. ಈ ಮೂಲಕ ಕಳೆದ 2 ತಿಂಗಳಲ್ಲೇ 2ನೇ ಬಾರಿಗೆ ರೆಪೋದರದಲ್ಲಿ ಏರಿಕೆಯಾದಂತಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ