1. ಹಸಿರು ಪಟಾಕಿಯನ್ನೇ ಖರೀದಿಸಿ ಪರಿಸರ ಸ್ನೇಹಿ ದೀಪಾವಳಿ ಆಚರಿಸಿ! ನೀವು ಹಸಿರು ಪಟಾಕಿ ಖರೀದಿ ಮಾಡುವ ಮುನ್ನ ಅದರಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅದನ್ನು ಖಾತರಿಪಡಿಸಿಕೊಳ್ಳಿ.
2. ಜನದಟ್ಟಣೆ ಪ್ರದೇಶ ಹಾಗೂ ಕಟ್ಟಡಗಳ ಬಳಿ ಪಟಾಕಿ ಹೊಡೆಯುವುದನ್ನು ನಿಲ್ಲಿಸಿ ಅಪಘಾತ ಸಂಭವಿಸುವುದನ್ನು ತಡೆಯಿರಿ. ಸುರಕ್ಷತೆಗಾಗಿ ಪಟಾಕಿ ಸಿಡಿಸುವಾಗ ಕೈಗವಚ ಹಾಗೂ ಕನ್ನಡಕ ಹಾಕಿಕೊಳ್ಳಿ.
3. ಬೇರೆಯವರಿಗೆ ತೊಂದರೆಯಾಗುವುದನ್ನು ತಡೆಯಲು ವಸತಿ ಪ್ರದೇಶಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಲ್ಲಿಸಿ. ಸಾರ್ವಜನಿಕರಿಗೆ ತೊಂದರೆಯಾಗುವ ಭಾರಿ ಪ್ರಮಾಣದ ಶಬ್ಧದ ಪಟಾಕಿಯನ್ನು ದೂರವಿರಿಸಿ.
4. ಬೆಂಕಿ ಹೊತ್ತಿಕೊಳ್ಳುವ ವಸ್ತುಗಳಿಂದ ಪಟಾಕಿ ದೂರವಿರಿಸಿ. ಪಟಾಕಿ ಹಾಗೂ ಜನರ ಮಧ್ಯೆ ಅಗತ್ಯವಾದ ಅಂತರ ಕಾಯ್ದುಕೊಳ್ಳಿ. ಮಕ್ಕಳು ಪಟಾಕಿ ಸಿಡಿಸುವಾಗ ದೊಡ್ಡವರು ಅವರ ಮೇಲೆ ನಿಗಾ ವಹಿಸಿರಬೇಕು.
5. ಹಿರಿಯ ನಾಗರೀಕರು ಹಾಗೂ ಅನಾರೋಗ್ಯಕ್ಕೆ ತುತ್ತಾಗಿರುವವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು, ಭಾರಿ ಶಬ್ಧ ಮಾಡುವ ಪಟಾಕಿ ಸಿಡಿಸಬೇಡಿ. ಪಟಾಕಿ ಸಿಡಿಸುವಾಗ ಪ್ರಾಣಿಗಳ ಸುರಕ್ಷತೆ ಬಗ್ಗೆ ಗಮನಹರಿಸಿ.
6. ಅಪಾಯಕಾರಿ ರಾಸಾಯನಿಕ ಬಳಕೆಯಾಗಿರುವ ಪಟಾಕಿ ಅಥವಾ ಅಧಿಕ ಶಬ್ಧ ಬರುವ ಪಟಾಕಿಯಿಂದ ದೂರವಿರಿ. ಸ್ವಚ್ಛತೆ ಕಾಪಾಡಿ, ಸಿಡಿಸಿದ ಪಟಾಕಿಯನ್ನು ಸರಿಯಾಗಿ ವಿಲೇವಾರಿ ಮಾಡಿ.
7. ನಿಗದಿತ ಸಮಯದಲ್ಲಿ ಮಾತ್ರ ಭಾರಿ ಪ್ರಮಾಣದ ಪಟಾಕಿ ಸಿಡಿಸಬೇಕು. ಉದಾಹರಣೆಗೆ: ರಾತ್ರಿ 8ರಿಂದ ರಾತ್ರಿ 10 ಗಂಟೆವರೆಗೆ. ಪರಿಸರ ಸ್ನೇಹಿ ಹಾಗೂ ಕಡಿಮೆ ಪ್ರಮಾಣದ ಪಟಾಕಿ ಮಾತ್ರ ಬಳಸಿ.
8. ಪಟಾಕಿ ಸಿಡಿಸಿದ ಬಳಿಕ ಅದರಿಂದ ಬಂದ ಬೆಂಕಿಯನ್ನು ಸರಿಯಾದ ರೀತಿಯಲ್ಲಿ ನಂದಿಸಿ. ಅನಗತ್ಯವಾದ ಬೆಂಕಿ ಅವಘಡ ಆಗದಂತೆ ನೋಡಿಕೊಳ್ಳಿ.
9. ಪಟಾಕಿ ಸಿಡಿಸುವ ಸಮಯದಲ್ಲಿ ಮದ್ಯ ಅಥವಾ ಮಾದಕದ್ರವ್ಯ ಸೇವನೆ ಮಾಡಬೇಡಿ.
10. ಗಾಯವಾಗುವ ಸಂಭವವಿರುವ ಕಾರಣ ಪ್ರಾಥಮಿಕ ಚಿಕಿತ್ಸಾ ಸಲಕರಣೆಯನ್ನು ಸಿದ್ಧವಾಗಿಟ್ಟುಕೊಂಡಿರಿ. ತುರ್ತುಪರಿಸ್ಥಿತಿ ಎದುರಾದ ಸಂದರ್ಭದಲ್ಲಿ 112 ಅಥವಾ 108 ಸಹಾಯವಾಣಿಗೆ ಕರೆ ಮಾಡಿ.
11. ಪಟಾಕಿ ಸಿಡಿಸುವುದರಿಂದ ಶಾಲೆ, ಆಸ್ಪತ್ರೆ ಅಥವಾ ಪ್ರಾರ್ಥನಾ ಮಂದಿರದಂತಹ ಸಾರ್ವಜನಿಕ ಸ್ಥಳಗಳಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಿ.
12. ಪಟಾಕಿ ಸಿಡಿಸುವ ಬಗ್ಗೆ ಸ್ಥಳೀಯ ಆಡಳಿತ ಮಂಡಳಿ ಕಡ್ಡಾಯವಾಗಿ ಮಾರ್ಗಸೂಚಿ ಪ್ರಕಟಿಸಬೇಕು. ಸುರಕ್ಷಿತ ಹಾಗೂ ಆನಂದಮಯ ದೀಪಾವಳಿ ಆಚರಣೆಗಾಗಿ ಸರ್ಕಾರದಿಂದ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಸುರಕ್ಷತಾ ಮಾರ್ಗಸೂಚಿ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ