ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ಮುಂಬೈನಿಂದ ಬಂದ ಬಂಡಾಯ ಶಾಸಕರು 6 ಗಂಟೆ 3 ನಿಮಿಷಕ್ಕೆ ವಿಧಾನಸೌಧ ತಲುಪಿದ್ದಾರೆ.
ಸರ್ವೋಚ್ಛ ನ್ಯಾಯಾಲಯ 6 ಗಂಟೆಯೊಳಗೆ ಸ್ಪೀಕರ್ ಎದುರು ಹಾಜರಾಗುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ ಮುಂಬೈನಿಂದ ಹೊರಟ ಶಾಸಕರು 5.20ಕ್ಕೆ ಬೆಂಗಳೂರು ವಿಮಾನ ನಿಲ್ದಾಣ ತಲುಪಿದರು. ಆದರೆ ಅಲ್ಲಿಂದ ಸ್ಪೀಕರ್ ಕಚೇರಿ ತಲುಪುವಾಗ ಅವಧಿ ಮೀರಿತ್ತು. ಭೈರತಿ ಬಸವರಾಜ ಓಡಿ ಬಂದು 6 ಗಂಟೆ 3 ನಿಮಿಷಕ್ಕೆ ಸ್ಪೀಕರ್ ಕಚೇರಿ ಪ್ರವೇಶಿಸಿದರು. ಉಳಿದ ಶಾಸಕರು ಪ್ರವೇಶಿಸುವಾಗ 6ಗಂಟೆ 5 ನಿಮಿಷವಾಗಿತ್ತು.
ಇದೀಗ ಸ್ಪೀಕರ್ ಕಚೇರಿಯಲ್ಲಿ ಶಾಸಕರೆಲ್ಲ ಸೇರಿದ್ದು, ಸ್ಪೀಕರ್ ನಿರ್ಧಾರ ಇನ್ನಷ್ಟೆ ಗೊತ್ತಾಗಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ