ತಗ್ಗಿದ ಮಳೆ; ಕುಗ್ಗಿದ ಜಲಾಶಯಗಳ ಹೊರಹರಿವು; ಕೇಂದ್ರ ಸಚಿವೆ ಪರಿಶೀಲನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಬೆಳಗಾವಿ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿಯಿಂದ ಮಳೆಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ಜಲಾಶಯಗಳ ಹೊರಹರಿವು ಕೂಡ ತಗ್ಗಿದೆ. ಇನ್ನೂ 2 ದಿನ ಮಳೆ ಬಾರದಿದ್ದರೆ ಪ್ರವಾಹ ಇಳಿಮುಖವಾಗಬಹುದು.
ಕೊಯ್ನಾ ಜಲಾಶಯಕ್ಕೆ 77,387 ಕ್ಯುಸೆಕ್ ನೀರು ಒಳ ಹರಿವಿದ್ದು, ಅಷ್ಟೇ ಪ್ರಮಾಣದಲ್ಲಿ ಹೊರಗೆ ಬಿಡಲಾಗುತ್ತಿದೆ. ಕೊಯ್ನಾ ಡ್ಯಾಮ್ ಗೇಟನ್ನು 9 ಅಡಿ ಹೆಚ್ಚಿಸಲಾಗಿದೆ. ಸಧ್ಯಕ್ಕೆ ಕೊಯ್ನಾದಲ್ಲಿ 103.19 ಟಿಎಂಸಿ ನೀರು ಸಂಗ್ರಹವಿದೆ. ಕೊಯ್ನಾನಗರದಲ್ಲಿ 94 ಮಿಮೀ ಮಳೆಯಾಗುತ್ತಿದ್ದು, ಮಹಾಬಲೇಶ್ವರದಲ್ಲಿ 123 ಮಿಮೀ ಮಳೆಯಾಗಿದೆ.
ಮಲಪ್ರಭಾ ಜಲಾಶಯಕ್ಕೆ 54,321 ಕ್ಯುಸೆಕ್ಸ್ ನೀರು ಬರುತ್ತಿದ್ದು, 50,964 ಮಿಮೀ ಹೊರಬಿಡಲಾಗುತ್ತಿದೆ. ಜಲಾಶಯದಲ್ಲಿ 2078.90 ಅಡಿ ನೀರಿದೆ. ಜಲಾಶಯದ ಮಟ್ಟ 2079.50 ಅಡಿ. ಹಿಡಕಲ್ ಜಲಾಶಯದಲ್ಲಿ 2171.40 ಅಡಿ ನೀರಿದ್ದು, ಜಲಾಶಯದ ಎತ್ತರ 21.75 ಅಡಿ. ಇಲ್ಲಿಂದ 90,617 ಕ್ಯುಸೆಕ್ಸ್ ನೀರು ಹೊರಬಿಡಲಾಗುತ್ತಿದೆ. 85,003 ಕ್ಯುಸೆಕ್ಸ್ ನೀರು ಬರುತ್ತಿದೆ.
ನಿರ್ಮಲಾ ಸೀತಾರಾಮನ್ ಪರಿಶೀಲನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ