ವಿಶ್ವನಾಥ ಕತ್ತಿ ದಂತ ವಿಜ್ಞಾನ ಮಹಾ ವಿದ್ಯಾಲಯದಲ್ಲಿ ಪ್ರಾದೇಶಿಕ ಸ್ಲೈಡ್ ಸೆಮಿನಾರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್ಇ ಹೈಯರ್ ಎಜುಕೇಷನ್ ಮತ್ತು ರಿಸರ್ಚ್ ಘಟಕದ ವಿಶ್ವನಾಥ ಕತ್ತಿ ದಂತ ವಿಜ್ಞಾನ ಮಹಾ ವಿದ್ಯಾಲಯದ ಓರಲ್ ಪೆಥಾಲಜಿ ಮತ್ತು ಮೈಕ್ರೋಬಯಾಲಜಿ ವಿಭಾಗ ಇಂಡಿಯನ್ ಅಸೋಸಿಯೇಷನ್ ಆಫ್ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಪ್ಯಾಥಾಲಜಿಸ್ಟ್ಸ್ ಅಡಿಯಲ್ಲಿ ವರ್ಚುವಲ್ ಮೋಡ್ ನಲ್ಲಿ ಇತ್ತೀಚೆಗೆ 14ನೇ ಪ್ರಾದೇಶಿಕ ಸ್ಲೈಡ್ ಸೆಮಿನಾರ್ ಆಯೋಜಿಸಿತ್ತು.
ಮಹಾರಾಷ್ಟ್ರದ ವಾರ್ಧಾದ ಶರದ್ ಪವಾರ್ ದಂತ ಮಹಾವಿದ್ಯಾಲಯದ ಪೆಥಾಲಜಿ ಮತ್ತು ಮೈಕ್ರೋಬಯಾಲಜಿ ವಿಭಾಗದ ಪ್ರಾಧ್ಯಾಪಕರಾದ ಡಾ.ಮಾಧುರಿ ಗವಾಂಡೆ “ಒಡೊಂಟೊಜೆನಿಕ್ ಟ್ಯೊಮರ್‌ಗಳ ಎಂಥ್ರಾಲಿಂಗ್ ಸ್ಪೆಕ್ಟ್ರಂ” ವಿಷಯದ ಉಪನ್ಯಾಸದಲ್ಲಿ ಒಡೊಂಟೊಜೆನಿಕ್ ಟ್ಯೂಮರ್‌ಗಳ ಕುರಿತು ಮಾತನಾಡುತ್ತ ತಮ್ಮ ಜ್ಞಾನ ಮತ್ತು ಅನುಭವವನ್ನು ಹಂಚಿಕೊಂಡು ಒಡೊಂಟೊಜೆನಿಕ್ ಗಡ್ಡೆಗಳ ಕ್ಷೇತ್ರದ ವಿಭಿನ್ನ ಪ್ರಕರಣಗಳನ್ನು ಉದಾಹರಿಸಿ ಮಾಹಿತಿ ನೀಡಿದರು.
ಸೆಮಿನಾರ್‌ನಲ್ಲಿ ದೇಶದಾದ್ಯಂತ ದಂತ ವೈದ್ಯಕೀಯ ಸಂಸ್ಥೆಗಳ ಸಿಬ್ಬಂದಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಹಲವು ವಿದೇಶದ ಪ್ರತಿನಿಧಿಗಳು ಸೇರಿದಂತೆ ಸುಮಾರು 400ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.
ಡಾ.ಚೇತನ್ ಸ್ವಾಗತಿಸಿದರು. ಪ್ರೊ. ವೀಣಾ ನಾಯ್ಕ್ ಪರಿಚಯಿಸಿದರು. ಪ್ರಾಚಾರ್ಯೆ ಡಾ.ಅಲ್ಕಾ ಕಾಳೆ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ