Cancer Hospital 2
Beereshwara 36
LaxmiTai 5

ಅನುಗ್ರಹ ಯೋಜನೆಯಡಿ ಪರಿಹಾರ ಧನ: ಅರ್ಜಿ ಆಹ್ವಾನ

Anvekar 3


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ೨೦೨೩-೨೪ನೇ ಸಾಲಿನ ಅನುಗ್ರಹ ಯೋಜನೆ”ಯನ್ನು ಪುನರಸ್ಥಾಪಿಸಿ ಜಾನುವಾರುಗಳ ಆಕಸ್ಮಿಕ ಸಾವಿನ ಸಂದರ್ಭಗಳಲ್ಲಿ ರೈತರು ಅನುಭವಿಸುವ ಸಂಕಷ್ಟ ನಿವಾರಣೆಗೆ ಹಸು/ಎಮ್ಮೆ ಮತ್ತು ಎತ್ತುಗಳ ಸಾವಿಗೆ ರೂ. ೧೦,೦೦೦/-ಗಳಂತೆ ಪರಿಹಾರ ಧನ ಒದಗಿಸಲಾಗುವುದು.
ಪರಿಹಾರ ಪಡೆಯ ಬಯಸುವ ಅಭ್ಯರ್ಥಿಗಳು ಆಕಸ್ಮಿಕ/ಅಕಾಲಿಕ/ಅಪಘಾತಗಳಿಂದ ಮರಣ ಹೊಂದಿದ ೬ ತಿಂಗಳ ಮೇಲ್ಪಟ್ಟ ಜಾನುವಾರು(ಹಸು/ಎಮ್ಮೆ/ಎತ್ತು/ ಹೋರಿ/ ಕಡಸು/ ಮಣಕ)ಗಳು ಇಲಾಖೆ ಬ್ಯಾಂಕ/ಸಾಲ ಯೋಜನೆಗಳಿಂದ ವಿಮೆಗೆ ಒಳಪಡಿಸದೇ ಇರುವ ಬಗ್ಗೆ ಸ್ಥಳೀಯ ಪಶುವೈದ್ಯರ ಪ್ರಮಾಣ ಪತ್ರ ಸಲ್ಲಿಸಬೇಕು.
ರಾಸುಗಳ ಮರಣೋತ್ತರ ಪರೀಕ್ಷೆಗೆ ಮುನ್ನ ಹಾಗೂ ಮರಣೋತ್ತರ ಪರೀಕ್ಷೆಯ ನಂತರದ ಜಿ.ಪಿ.ಎಸ್. ಕಲರ್ ಫೋಟೋಗಳಿಗೆ ಪಶು ವೈದ್ಯರಿಂದ ದೃಢೀಕರಿಸಬೇಕು.
ಅಪಘಾತದಿಂದ ಮರಣಿಸಿದ ಜಾನುವಾರುಗಳಿಗೆ ಪೋಲಿಸ್ ಇಲಾಖೆಯಿಂದ ಎಫ್.ಆಯ್.ಆರ್. ವರದಿ ಕಡ್ಡಾಯವಾಗಿ ಮಾಡಿರಬೇಕು.
ಒಂದು ಕುಟುಂಬದಲ್ಲಿ ಒಂದೇ ಪ್ರಕರಣದಲ್ಲಿ ೫ಕ್ಕಿಂತ ಹೆಚ್ಚು ರಾಸುಗಳು ಮರಣ ಹೊಂದಿದ್ದಲ್ಲಿ, ಪ್ರಯೋಗಾಗಲಯದ ದೃಢೀಕೃತ ಪ್ರಮಾಣ ಪತ್ರ ಕಡ್ಡಾಯವಾಗಿ ಇರಬೇಕು.
ಫಲಾನುಭವಿ ಆಧಾರ ಸಂಖ್ಯೆ/ಮೊಬೈಲ್ ಸಂಖ್ಯೆ/ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ/ಈಖUIಖಿS Iಆ ಇತ್ಯಾದಿ ವಿವರಗಳ ದಾಖಲೆಯನ್ನು ಸ್ಥಳೀಯ ಪಶುವೈದ್ಯಾಧಿಕಾರಿಗಳಿಂದ ದೃಢೀಕರಿಸಿರಬೇಕು.

ಜಾನುವಾರು ಮಾಲೀಕರು ತಮ್ಮ ಜಾನುವಾರುಗಳು ಆಕಸ್ಮಿಕ ಮರಣ ಹೊಂದಿದ ಸಂದರ್ಭಗಳಲ್ಲಿ ಪರಿಹಾರ ಪಡೆಯಲು ಆಯಾ ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳು(ಆ), ಪಶುವೈದ್ಯಾಧಿಕಾರಿಗಳು, ಪಶು ಆಸ್ಪತ್ರೆ/ ಪಶುಚಿಕಿತ್ಸಾಲಯ/ಪ್ರಾಥಮಿಕ ಪಶು ಚಿಕಿತ್ಸಾಲಯ ಇವರನ್ನು ಸಂಪರ್ಕಿಸಿ ಯೋಜನೆಯ ಸದುಪಯೋಗ ಪಡೆಯಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು(ಆ) ಆದ ಡಾ. ರಾಜೀವ ಎನ್. ಕೂಲೇರ ಅವರು ತಿಳಿಸಿದ್ದಾರೆ.

Emergency Service

ಸಂಪರ್ಕಿಸಬೇಕಾದ ಪಶುವೈದ್ಯಾಧಿಕಾರಿಗಳ ವಿವರ:
ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಅಥಣಿ ಹಾಗೂ ಕಾಗವಾಡ ೯೬೩೨೦೯೩೩೩೭, ಬೈಲಹೊಂಗಲ ೯೪೪೮೧೧೬೬೭೧, ಕಿತ್ತೂರ ೯೯೭೨೯೯೬೨೦೯, ಬೆಳಗಾವಿ ೯೪೪೮೧೪೮೮೨೨, ಚಿಕ್ಕೋಡಿ ೮೪೩೧೪೧೪೮೩೯, ನಿಪ್ಪಾಣಿ ೯೧೧೦೪೧೮೩೩೦,ಗೋಕಾಕ ಹಾಗೂ ಮೂಡಲಗಿ ೯೬೮೬೮೨೦೪೫೬, ಹುಕ್ಕೇರಿ ೯೪೪೮೫೫೨೬೯೩, ಖಾನಾಪೂರ ೮೦೭೩೦೨೮೪೪೮, ರಾಯಭಾಗ ೯೬೬೩೦೬೦೯೪೯, ರಾಮದುರ್ಗ ೯೯೪೫೮೫೪೨೭೭, ಸವದತ್ತಿ ೯೪೪೯೫೧೮೮೬೪ ಇಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Bottom Add3
Bottom Ad 2