ಕೆಎಲ್ಎಸ್ ಜಿಐಟಿ ಮತ್ತು ಹೆಸ್ಕಾಂ ಮಧ್ಯೆ ನವೀಕರಣ ಒಡಂಬಡಿಕೆಗೆ ಸಹಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿನ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಕೆಎಲ್‌ಎಸ್ ಜಿಐಟಿ) ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗ ಹಾಗೂ ಹುಬ್ಬಳ್ಳಿಯ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಯೊಂದಿಗೆ ವಿಸ್ತರಿತ ತಿಳಿವಳಿಕೆ ಒಪ್ಪಂದ ಸಹಿ ಸಮಾರಂಭ ಹುಬ್ಬಳ್ಳಿಯಲ್ಲಿ ನಡೆಯಿತು.
ಈ ನವೀಕರಿಸಿದ ಒಪ್ಪಂದವು ಮುಂದಿನ ಐದು ವರ್ಷಗಳವರೆಗೆ ಕೆಎಲ್‌ಎಸ್ ಜಿಐಟಿ ಮತ್ತು ಹೆಸ್ಕಾಂ ನಡುವಿನ ಶೈಕ್ಷಣಿಕ ಸಹಯೋಗವನ್ನು ಹೆಚ್ಚಿಸುವ, ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಮತ್ತು ತರಬೇತಿ ಅವಕಾಶಗಳನ್ನು ಒದಗಿಸಲು , ಹಾಗೂ ಉದಯೋನ್ಮುಖ ಎಂಜಿನಿಯರ್‌ಗಳಿಗೆ ಪ್ರಾಯೋಗಿಕ ಮಾನ್ಯತೆ ಮತ್ತು ಕೈಗಾರಿಕಾ ತರಬೇತಿ ನೀಡುವಲ್ಲಿ ಎರಡೂ ಸಂಸ್ಥೆಗಳ ಬದ್ಧತೆಗೆ ಸಹಕಾರಿಯಾಗಲಿದೆ.
ಒಪ್ಪಂದಕ್ಕೆ ಸಹಿ ಹಾಕುವ ಸಮಾರಂಭದಲ್ಲಿ ಹೆಸ್ಕಾಂನ ಎಚ್‌ಆರ್‌ಡಿ ಪ್ರಧಾನ ವ್ಯವಸ್ಥಾಪಕ ಡಾ.ಸಿದ್ದು ಹುಲ್ಲಳ್ಳಿ, ಕೆಎಲ್‌ಎಸ್ ಜಿಐಟಿಯ ಪ್ರೊ.ಎಸ್.ಜಿ.ಕುಲಕರ್ಣಿ ಮತ್ತು ಪ್ರೊ.ಪರಾಗ್ ದಾತಾರ್ ಸೇರಿದಂತೆ, ಡಾ.ವಿ.ಎ. ಕುಲಕರ್ಣಿ, ವಿಡಿಐಟಿ ಪ್ರಾಚಾರ್ಯರು, ಹಳಿಯಾಳ ಉಪಸ್ಥಿತರಿದ್ದರು.
ಈ ಕಾರ್ಯಕ್ರಮಕ್ಕೆ ಕೆಎಲ್‌ಎಸ್ ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರು, ಕೆಎಲ್‌ಎಸ್ ಜಿಐಟಿ ಪ್ರೊ.ಡಿ.ಎ.ಕುಲಕರ್ಣಿ ಶುಭ ಹಾರೈಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ