ರೇಣುಕಾಸ್ವಾಮಿ ಕೊಲೆ ಆರೋಪಿ ಹಿಂಡಲಗಾ ಜೈಲಿಗೆ ಶಿಫ್ಟ್: ಕಾರಾಗೃಹದ ಅಧಿಕ್ಷಕ ಕೃಷ್ಣಮೂರ್ತಿ ಹೇಳಿದ್ದೇನು..?
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ ಗ್ಯಾಂಗ್ ನಲ್ಲಿದ್ದ ಎ14 ಆರೋಪಿ ಪ್ರದೂಶ್ ಅತಿ ಭದ್ರತಾ ಜೈಲಿನಲ್ಲಿ ಇಡಲಾಗುವುದು ಎಂದು ಹಿಂಡಲಗಾ ಕಾರಾಗೃಹದ ಸಹಾಯಕ ಅಧಿಕ್ಷಕ ವಿ. ಕೃಷ್ಣಮೂರ್ತಿ ಹೇಳಿದರು.
ಗುರುವಾರ ಹಿಂಡಲಗಾ ಕಾರಾಗೃಹದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವೇ ಹೊತ್ತಿನಲ್ಲಿ A14 ಪ್ರದೋಶ್ ಹಿಂಡಲಗಾ ಜೈಲಿಗೆ ಶಿಫ್ಟ್ ಆಗಲಿದ್ದಾರೆ. ಜೈಲಿನಲ್ಲಿ ಸಿಸಿಟಿವಿ ಅಳವಡಿಸುವ ಕಾರ್ಯ ನಡೆಯುತ್ತಿದೆ. ಹೊರಗೆ ಸಿಸಿಟಿವಿ ಹಾಕುವ ಕೆಲಸ ಮಾಡುತ್ತಿದ್ದೇವೆ. ಮಳೆಯಿಂದ ಕೆಲಸದಲ್ಲಿ ವ್ಯತ್ಯಯ ಉಂಟಾಗಿದೆ. ಅತಿ ಭದ್ರತಾ ವಿಭಾಗದಲ್ಲಿ ಪ್ರದ್ರೂಶ್ ಶಿಫ್ಟ್ ಮಾಡಿ ಹೆಚ್ಚಿನ ಭದ್ರತೆ ಕ್ರಮ ವಹಿಸುತ್ತೇವೆ ಎಂದರು.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಭದ್ರತೆ ಕಾರ್ಯ.ಪ್ರದೂಷ್ ಭದ್ರತೆಗೆ ಸಹಾಯಕ ಜೈಲರ್ ಹಾಗೂ ಏಳು ಜನ ಸಿಬ್ಬಂದಿ ಕಾರ್ಯ ನಿರ್ವಹಣೆ ಮಾಡುತ್ತಾರೆ. ಜೈಲಿನಲ್ಲಿ 2 ಜಿ ಜಾಮರ ಇದ್ದು. 5G ಹೊಸ ಜಾಮರ್ ಅಳಡಿಸಲು ಸಿದ್ಧತೆ ನಡೆಸಲಾಗುತ್ತಿದೆ. ಟೆಂಡರ್ ಪಡೆದವರಿಗೆ ನಾವು ಒತ್ತಾಯ ಮಾಡಿದ್ದೇವೆ ಆದಷ್ಟು ಬೇಗ ಮುಗಿಸಿ ಕೊಡಬೇಕೆಂದು ಎಂದರು.
ಜೈಲಿನಲ್ಲಿ ಊಟ, ಬಿಡಿ, ಸಿಗರೆಟ್ ಎಲ್ಲಾ ವಸ್ತು ನಿಷೇಧ ಹೇರಿದ್ದೇವೆ. ನಮ್ಮ ಸಿಬ್ಬಂದಿಯನ್ನು ಸಹ ತಪಾಸಣೆಗೆ ಒಳಪಡಿಸಲಾಗಿದೆ. ಯಾರೇ ಬಂದರೂ ಭದ್ರತೆ ದೃಷ್ಟಿಯಿಂದ ಅಂದೇರಿ ಸೆಲ್ ನಲ್ಲಿ ಇಡುತ್ತೇವೆ. ನಿಯಮಗಳ ಪ್ರಕಾರ ಸಂಬಂಧಿಗಳು ಬಂದ್ರೆ ಅವಕಾಶ ಕೊಡುತ್ತೇವೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ