Latest

ಮನೆಯ ಪೈಪ್ ಗಳಲ್ಲೂ ಕಂತೆ ಕಂತೆ ಹಣ; ಬಕೆಟ್ ನಲ್ಲಿ ಮೊಗೆದು ರಾಶಿ ಹಾಕಿದ ACB ಅಧಿಕಾರಿಗಳು

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಭ್ರಷ್ಟ ಅಧಿಕಾರಿಗಳ ವಿರುದ್ಧ ಎಸಿಬಿ ಸಮರ ಸಾರಿದ್ದು, ತಂಡೋಪತಂಡವಾಗಿ ರಾಜ್ಯದ 68 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ. ಭ್ರಷ್ಟರ ಮನೆಯಲ್ಲಿ ಪತ್ತೆಯಾಗಿರುವ ಕೆಜಿ ಗಟ್ಟಲೆ ಚಿನ್ನಾಭರಣ, ಕಂತೆ ಕಂತೆ ನೋಟು, ಅಕ್ರಮ ಸಂಪತ್ತು ಕಂಡು ಅಧಿಕಾರಿಗಳೇ ದಂಗಾಗಿಹೋಗಿದ್ದಾರೆ.

ಎಸಿಬಿ ದಾಳಿಗೆ ಹೆದರಿ ಕಲಬುರ್ಗಿ ಲೋಕೋಪಯೋಗಿ ಇಲಾಖೆ ಜೆಇ ಶಾಂತಗೌಡ ಮನೆಯ ಪೈಪ್ ಗಳಲ್ಲಿ ನಗದು ಹಣವನ್ನು ಬಚ್ಚಿಟ್ಟಿದ್ದು, ಪೈಪ್ ಕತ್ತರಿಸಿ ಬಕೆಟ್ ಗಳಲ್ಲಿ ಕಂತೆ ಕಂತೆ ಹಣವನ್ನು ಮೊಗೆದು ಹೊರತೆಗೆಯುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಶಾಂತಗೌಡ ಅವರ ಕಲಬುರ್ಗಿ ಜಿಲ್ಲೆಯ ಗುಬ್ಬಿ ಕಾಲೋನಿಯಲ್ಲಿರುವ ಮೂರು ಅಂತಸ್ಥಿನ ಭವ್ಯ ಬಂಗಲೆಯಲ್ಲಿ ಜಾಲಾಡಿರುವ ಎಸಿಬಿ ಅಧಿಕಾರಿಗಳು ಅಪಾರ ಸಂಪತ್ತು, ಅಕ್ರಮ ಆಸ್ತಿಗಳನ್ನು ವಶಕ್ಕೆ ಪಡೆದಿದ್ದಾರೆ. ಮನೆಯ ಪೈಪ್ ಗಳನ್ನು ಪ್ಲಂಬರ್ ಸಹಾಯದಿಂದ ಕತ್ತರಿಸಿದ್ದು, ಈ ವೇಳೆ ಪೈಪ್ ನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ. ಅವುಗಳನ್ನು ಬಕೆಟ್ ಗಳಲ್ಲಿ ತುಂಬಿ ಹೊರ ತಂದಿದ್ದಾರೆ.

ವಿವಿ ರಸ್ತೆಯಲ್ಲಿ ಎರಡು ನಿವೇಶನ, ತಾಲೂಕಿನ ಹಂಗರಗಾ ಗ್ರಾಮದಲ್ಲಿ 40 ಎಕರೆ ಜಮೀನು, ಹಂಗರಗಾ ಗ್ರಾಮದಲ್ಲಿ ಮೂರು ಮನೆ, ಬೆಂಗಳೂರಿನಲ್ಲಿಯೂ ಅಕ್ರಮ ಆಸ್ತಿಯನ್ನು ಶಾಂತಗೌಡ ಹೊಂದಿರುವುದಾಗಿ ತಿಳಿದುಬಂದಿದೆ.
ಬೆಳಗಾವಿಯಲ್ಲಿ ಮೂವರು ಅಧಿಕಾರಿಗಳಿಗೆ ಎಸಿಬಿ ಶಾಕ್

Home add -Advt

Related Articles

Back to top button