Kannada NewsKarnataka NewsLatest

95 ಜನರ ವರದಿಯ ನಿರೀಕ್ಷೆಯಲ್ಲಿ ಜಿಲ್ಲಾಡಳಿತ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಜಿಲ್ಲೆಯಲ್ಲಿ ಈವರೆಗೆ 18 ಜನರಿಗೆ ಕೊರೋನಾ ವೈರಸ್ ದೃಢಪಟ್ಟಿದೆ.

ಒಟ್ಟೂ 484 ಜನರ ಗಂಟಲು ದ್ರವಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 371 ನೆಗೆಟಿವ್ ಬಂದಿದ್ದರೆ 18 ಪೊಸಿಟಿವ್ ಬಂದಿದೆ. ಇನ್ನೂ 95 ಜನರ ವರದಿ ಬರಬೇಕಿದೆ.

18 ಜನರ ಪೈಕಿ ಬೆಳಗಾವಿ ಕ್ಯಾಂಪ್ ಪ್ರದೇಶದ ಒಬ್ಬ, ಪಿರನವಾಡಿಯ ಒಬ್ಬ, ಬೆಳಗುಂದಿಯ ಒಬ್ಬ, ಹಿರೇಬಾಗೇವಾಡಿಯ 4 ಹಾಗೂ ರಾಯಬಾಗ ತಾಲೂಕು ಕುಡಚಿಯ 11 ಜನರಿದ್ದಾರೆ. ಇವರೆಲ್ಲರೂ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಬದವರು ಅಥವಾ ಅವರ ಸಂಪರ್ಕಕ್ಕೆ ಬಂದವರು.

ಜಿಲ್ಲೆಯಲ್ಲಿ ಇಲ್ಲಿಯವರೆಗೆ  1785 ಜನರ ಮೇಲೆ ನಿಗಾವಹಿಸಲಾಗಿದೆ. 276 ಜನ 14 ದಿನದ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ. ಆಸ್ಪತ್ರೆಯ ಐಸೋಲೇಟೆಡ್ ವಾರ್ಡ್ ನಲ್ಲಿರುವವರು 20 ಜನ. 664 ಜನರು 14 ದಿನದ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ.  825 ಜನರು 28 ದಿನದ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ.

ನಿಜಾಮುದ್ದೀನ್ ಗೆ ತೆರಳಿ ಬಂದವರ ಸಂಪರ್ಕಕ್ಕೆ ಬಂದವರಿಗಾಗಿ ಇನ್ನೂ ಶೋಧ ಮುಂದುವರಿದಿದೆ. ಕೆಲವರು ರಾಜ್ಯದ ಹೊರಗಿದ್ದಾರೆ. ಕ್ಯಾಂಪ್ ಪ್ರದೇಶ,ಪಿರನವಾಡಿ, ಹಿರೇಬಾಗೇವಾಡಿ ಹಾಗೂ ಕುಡಚಿ ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ. ಈ ಪ್ರದೇಶದಿಂದ ಯಾರಿಗೂ ಹೊರಗೆ ಹೂಗಲು ಅಥವಾ ಹೊರಗಿನಿಂದ ಯಾರಿಗೂ ಈ ಪ್ರದೇಶಕ್ಕೆ ಬರಲು ಅವಕಾಶ ನೀಡಲಾಗುತ್ತಿಲ್ಲ.

ಬುಧವಾರದಿಂದ ರಾಜ್ಯಾದ್ಯಂತ ಲಾಕ್ ಡೌನ್ ಇನ್ನಷ್ಟು ಬಿಗಿಯಾಗಲಿದೆ. ಸಾರ್ವಜನಿಕರು ಮನೆಯಲ್ಲೇ ಉಳಿದು ಸಹಕರಿಸದಿದ್ದಲ್ಲಿ ಕಠಿಣ ಕ್ರಮ ಅನಿವಾರ್ಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದ್ದಾರೆ. ರಾಜ್ಯದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ 57 ಸಾವಿರಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಹುಷಾರಾಗಿರಿ, ರಾಜ್ಯದಲ್ಲಿ ಈವರೆಗೆ 57 ಸಾವಿರ ವಾಹನ ಸೀಜ್ -ಯಡಿಯೂರಪ್ಪ ಮಾಹಿತಿ

ಮೇ 3ರ ವರೆಗೆ ಲಾಕ್ ಡೌನ್ ವಿಸ್ತರಣೆ, ಇನ್ನಷ್ಟು ಕಠಿಣ – ಮೋದಿ ಘೋಷಣೆ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button