*ಡಿಸಿಸಿ ಬ್ಯಾಂಕ್ ನ ನಾಲ್ಕು ಕ್ಷೇತ್ರಗಳ ಫಲಿತಾಂಶ ಪ್ರಕಟ: ಎಲ್ಲರೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳೆ: ಅಣ್ಣಾಸಾಹೆಬ್ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಅಕ್ಟೋಬರ್ 19 ರಂದು ಚುನಾವಣೆಗೆ ಮತದಾನ ನಡೆದಿತ್ತು. ಕೋರ್ಟ್ ನಲ್ಲಿ ಕೆಲವು ಪಿಕೆಪಿಎಸ್ ಗಳ ವಿಚಾರಣೆ ಬಾಕಿ ಉಳಿದಿದ್ದ ಹಿನ್ನೆಲೆಯಲ್ಲಿ ಫಲಿತಾಂಶ ಉಳಿದುಕೊಂಡಿತು. ಆದರೆ ಇಂದು ನಾಲ್ಕು ಕ್ಷೇತ್ರಗಳ ಫಲಿತಾಂಶ ಘೋಷಣೆ ಆಗಿದೆ.
ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಬಾಕಿ ಉಳಿದಿದ್ದ ಡಿಸಿಸಿ ಬ್ಯಾಂಕ್ ಚುನಾವಣೆಯ ನಾಲ್ಕು ಕ್ಷೇತ್ರಗಳ ಫಲಿತಾಂಶ ಇಂದು ಚುನಾವಣಾಧಿಕಾರಿ ಶ್ರವಣ ನಾಯಕ ಅವರು ಪ್ರಕಟಿಸಿದರು.

ಬೈಲಹೊಂಗಲ, ಕಿತ್ತೂರು, ನಿಪ್ಪಾಣಿ ಹಾಗೂ ಹುಕ್ಕೇರಿ ಫಲಿತಾಂಶ ಪ್ರಕಟಿಸಲಾಗಿದೆ. ನಿಪ್ಪಾಣಿ ಕ್ಷೇತ್ರದಿಂದ ನಿರ್ದೇಶಕರಾಗಿ ಅಣ್ಣಾಸಾಬ್ ಜೊಲ್ಲೆ 71 ಮತ ಪಡೆದು ಆಯ್ಕೆಯಾದರು. ಹುಕ್ಕೇರಿಯಿಂದ ರಮೇಶ ಕತ್ತಿ 59 ಮತ ಪಡೆದು ಆಯ್ಕೆಯಾದರು. ಬೈಲಹೊಂಗಲ ಕ್ಷೇತ್ರದಿಂದ ನಿರ್ದೇಶಕರಾಗಿ ಮಹಾಂತೇಶ ದೊಡ್ಡಗೌಡರ್ 54 ಮತದಿಂದ ಆಯ್ಕೆಯಾದಾರು. ಕಿತ್ತೂರು ಮತ ಕ್ಷೇತ್ರದಿಂದ ನಿರ್ದೇಶಕರಾಗಿ ನಾನಾಸಾಹೇಬ್ ಪಾಟೀಲ್ 17 ಮತ ಪಡೆದು ಆಯ್ಕೆಯಾದರು.

ಎಲ್ಲರೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳೆ: ಅಣ್ಣಾಸಾಹೆಬ್ ಜೊಲ್ಲೆ
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅಣ್ಣಾಸಾಹೆಬ್ ಜೊಲ್ಲೆ ಅವರು, ಹೈಕೋರ್ಟ್ ಆದೇಶದಂತೆ ಇವತ್ತು ಫಲಿತಾಂಶ ಘೋಷಣೆ ಮಾಡಿದ್ದಾರೆ. ಚುನಾವಣೆಯಲ್ಲಿ ನಾನು ಸೆರಿ ನಾಲ್ಕು ಮತಕ್ಷೇತ್ರದ ಫಲಿತಾಂಶ ಬಂದಿದೆ. ಇನ್ನೊಂದು 15 ದಿನಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ನಡೆಯಲಿದೆ.
ನಾನು ಸೇರಿದಂತೆ ಎಲ್ಲರೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದಾರೆ. ನಾವೆಲ್ಲರೂ ಜಾರಕಿಹೊಳಿ ಬ್ರದರ್ಸ್ ಬಣದಲ್ಲಿ ಇದ್ದೇವೆ. ಬಾಲಚಂದ್ರ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಜೊತೆಗೆ ಚರ್ಚಿಸಿ ಅಧ್ಯಕ್ಷರ ಆಯ್ಕೆ ಮಾಡುತ್ತೇವೆ ಎಂದರು.
ನನಗೆ ಯಾವುದೇ ಅಸಮಾಧಾನವಿಲ್ಲ: ಮಹಾಂತೇಶ ದೊಡ್ಡಗೌಡರ

ಬೈಲಹೊಂಗಲ ತಾಲೂಕಿನ ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಮಾತನಾಡಿ, ಚುನಾವಣೆಯಲ್ಲಿ ನಾನು ಅಧಿಕೃತವಾಗಿ ಗೆಲವು ಸಾಧಿಸಿದ್ದೇನೆ. ಕಿತ್ತೂರು ಸೋಲಿನಿಂದ ನನಗೆ ಯಾವುದೇ ಅಸಮಾಧಾನವಿಲ್ಲ. ನಾನು ಅಣ್ಣಸಾಹೇಬ್ ಜೋಲ್ಲೆ ಜೊತೆಗೆ ಬಂದಿದ್ದೇವೆ. ಅಸಮಾಧಾನ ಬಗ್ಗೆ ಯಾರು ಹೇಳಿದ್ದಾರೆ ಅವರಿಗೆ ಕೇಳಿ ಎಂದರು.
ಕಿತ್ತೂರು ಚುನಾವಣೆಯಲ್ಲಿ ಬೆನ್ನಿಗೆ ಚೂರಿ ಹಾಕಿದ್ದಕ್ಕೆ ಸೋಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ 16 ಜನರು ಆಕಾಂಕ್ಷಿಗಳಿದ್ದೇವೆ ಎಂದು ಮಹಾಂತೇಶ ದೊಡ್ಡಗೌಡರ ಅವರು, ತಿಳಿಸಿದರು.
ನಾವು ಏನಿದ್ದರೂ ಸತೀಶ್ ಜಾರಕಿಹೊಳಿ ಪರವಾಗಿದ್ದೇವೆ
ಪ್ರಮಾಣ ಪತ್ರ ಸ್ವೀಕರಿಸಿದ ಬಳಿಕ ನಾನಾಸಾಹೇಬ್ ಪಾಟೀಲ್ ಮಾತನಾಡಿ, 17 ಮತಗಳಿಂದ ನನ್ನ ಗೆಲವು ಆಗಿದೆ. 32 ಮತಗಳಲ್ಲಿ 15 ಮತ ವಿರೋಧಿಗಳಿಗೆ ಬಿದ್ದಿದೆ ಎಂದರು.
ಕಿತ್ತೂರು ತಾಲೂಕಿನ ಚುನಾವಣೆಯಲ್ಲಿ 1 ಮತ ಅಡ್ಡ ಮತದಾನ ಆಗಿಲ್ಲ. 7 ಜನರು ಅಡ್ಡ ಮತದಾನ ಮಾಡಿದ್ದಾರೆ. ನಾವು ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಚುನಾವಣೆ ಮಾಡಿದ್ದೇವೆ. ನಾವು ಏನಿದ್ದರೂ ಸತೀಶ್ ಜಾರಕಿಹೊಳಿ ಪರವಾಗಿದ್ದೇವೆ ಎಂದು ನಾನಾಸಾಹೇಬ್ ಪಾಟೀಲ್ ಅವರು ತಿಳಿಸಿದರು.


