ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (CUET)ಗೆ ಮೊದಲ ದಿನ ಹಾಜರಾಗದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಅವಕಾಶ ನೀಡಲಾಗದು ಎಂದು ಯುಜಿಸಿ ಚೇರ್ಮನ್ ಮಮಿದಾಳ ಜಗದೀಶ ಹೇಳಿದ್ದಾರೆ.
ದೇಶದ ನಾನಾ ನಗರಗಳ ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗದಿರುವುದಕ್ಕೆ ಕಾರಣಗಳನ್ನು ನೀಡಿದ್ದಾರೆ. ಕೆಲವರು ಪರೀಕ್ಷಾ ಕೇಂದ್ರಗಳ ಹಠಾತ್ ಬದಲಾವಣೆಗಳಿಂದಾಗಿ ತಾವು ಪರೀಕ್ಷೆಗೆ ಹಾಜರಾಗಿಲ್ಲ ಎಂದು ಹೇಳಿಕೊಂಡಿದ್ದರೆ ಇನ್ನು ಕೆಲವರು ವಿಭಿನ್ನ ಕಾರಣಗಳನ್ನು ನೀಡಿದ್ದಾರೆ.
ಮೊದಲ ಬಾರಿಗೆ ಸಿಯುಇಟಿ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಎರಡು ಹಂತಗಳಲ್ಲಿ ನಡೆಸುತ್ತಿದೆ. ಈ ಬೃಹತ್ ಪ್ರಮಾಣದ ಅನುಷ್ಠಾನವು ರಾಷ್ಟ್ರೀಯ ಶಿಕ್ಷಣ ನೀತಿ (NEP)ಯ ಪ್ರಕಾರ ಉನ್ನತ ಶಿಕ್ಷಣಗಳ ಸಂಸ್ಥೆಗಳ ಪ್ರವೇಶ ಸಿಯುಇಟಿ ಮೂಲಕ ನಡೆಯಬೇಕೆಂಬ ನಿಯಮವಿದೆ.
ಪರೀಕ್ಷೆಯ ಮೊದಲ ದಿನವಾದ ಜು.15ರಂದು ಸಾಕಷ್ಟು ಅವ್ಯವಸ್ಥೆಗಳಾಗಿ ವಿದ್ಯಾರ್ಥಿಗಳು ಒಂದು ಪರೀಕ್ಷಾ ಕೇಂದ್ರದಿಂದ ಇನ್ನೊಂದು ಕೇಂದ್ರಕ್ಕೆ ಅಲೆದಾಡುವಂತಾಗಿತ್ತು. ಇದರಿಂದ ಅನೇಕ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತಮ್ಮ ಪರೀಕ್ಷಾ ಕೇಂದ್ರ ಹುಡುಕಿಕೊಳ್ಳಲಾಗದೆ ಪರೀಕ್ಷೆಯಿಂದ ವಂಚಿತರಾಗಿದ್ದರು.
ಕುತೂಹಲ ಮೂಡಿಸಿದ ಕಿಚ್ಚ ಸುದೀಪ್-ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ