Kannada NewsLatest

ಹೊಳೆಯಲ್ಲಿ ಕೊಚ್ಚಿಹೋದ ಮಹಿಳೆ

ಪ್ರಗತಿವಾಹಿನಿ ಸುದ್ದಿ, ಸುರೇಬಾನ:ಸವದತ್ತಿ ಸುತ್ತ ಗುರುವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಮಹಿಳೆಯೊಬ್ಬಳು ಹಳ್ಳದಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದಾಳೆ.ರಾಮದುರ್ಗ ತಾಲೂಕಿನ ಸುರೇಬಾನ ಸಮೀಪದ ಕಿತ್ತೂರ ಗ್ರಾಮದ ರೇಣವ್ವ ರಾಮಣ್ಣ ಚಿಂತಾಲ(50) ಮೃತ ಮಹಿಳೆ.ಇವರು ಮನೆಬಳಕೆಗೆ ಕಟ್ಟಿಗೆ ತರಲು ಕಿತ್ತೂರ ಹತ್ತಿರದ ಬಸವನಕಟ್ಟಿ ಹಳ್ಳಕ್ಕೆ ಹೋದಾಗ ಸವದತ್ತಿ, ಯಲ್ಲಮ್ಮನ ಗುಡ್ಡದಲ್ಲಿ ಬಾರಿ ಮಳೆಯಾದ ಹಿನ್ನೆಲೆಯಲ್ಲಿ ಈ ಹಳ್ಳಕ್ಕೆ ಅತೀ ವೇಗದಲ್ಲಿ ನೀರು ಹರಿದುಬಂದು ನೀರಿನ ಸೆಳುವಿಗೆ ಸಿಲುಕಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

Related Articles

Back to top button