ಪ್ರಗತಿವಾಹಿನಿ ಸುದ್ದಿ: ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹುದ್ದೆಯನ್ನು ಡಿಸಿಎಂ ಡಿಕೆಶಿ ಅವರಿಗೆ ಬಿಟ್ಟುಕೊಡಬೇಕು ಎಂಬ ಚಂದ್ರಶೇಖರ್ ಸ್ವಾಮೀಜಿ ಅವರ ಧೋರಣೆಯನ್ನು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಖಂಡಿಸಿದರು.
ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ರೇವಣ್ಣ, ಯಾರನ್ನಾದರೂ ಸಿಎಂ ಮಾಡಿಕೊಳ್ಳಲಿ ನಮಗೆ ಬೇಕಿಲ್ಲ. ಸಿಎಂ ಹುದ್ದೆ ನಮ್ಮ ಬಳಿ ಇಲ್ಲ. ಕಾಂಗ್ರೆಸ್ ಬಳಿ ಇದೆ. ಅವರದ್ದು ರಾಷ್ಟ್ರೀಯ ಪಕ್ಷ ಯಾರನ್ನಾದರೂ ಸಿಎಂ ಮಾಡಲಿ ಬಿಡಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದರು.
ಇನ್ನು ಆ ಸ್ವಾಮೀಜಿ ಯಾವ ಮಟ್ಟದಲ್ಲಿದ್ದರು ಅಂತಾ ತಾವು ಕಣ್ಣಾರೆ ಕಂಡಿದ್ದಾಗಿ ಹೇಳಿದ ರೇವಣ್ಣ, ತಮ್ಮ ತಂದೆ ಹೆಚ್.ಡಿ.ದೇವೇಗೌಡರು ಸ್ವಾಮೀಜಿ ಹಾಗೂ ಮಠಕ್ಕೆ ಎಷ್ಟೆಲ್ಲಾ ಸಹಾಯ, ಸೇವೆ ಮಾಡಿದ್ದರು ಎಂಬುದು ಗೊತ್ತಿದೆ. ದೇವೇಗೌಡರ ಬಗ್ಗೆ ಸಚಿವ ರಾಜಣ್ಣ ಮಾತನಾಡಿದ್ದಾಗ ಈ ಸ್ವಾಮೀಜಿ ಎಲ್ಲಿಗೆ ಹೋಗಿದ್ದರು? ಯಾವತ್ತಾದರೂ ಅವರು ದೇವೇಗೌಡರ ಪರ ಮಾತನಾಡಿದ್ರಾ? ಹಾಗಂತ ದೇವೇಗೌಡರ ಪರ ಮಾತನಾಡಲಿ ಎಂದು ತಾವು ಬಯಸುತ್ತಿಲ್ಲ. ಕನಿಷ್ಠ ಪಕ್ಷ ಸಮಾಜದ ಮುಖಂಡರು ಅಂತಾದ್ರೂ ಮಾತನಾಡಬೇಕಿತ್ತಲ್ವಾ ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ