
ಪ್ರಗತಿವಾಹಿನಿ ಸುದ್ದಿ – ಮಂಗಳೂರು: –
ನಿಂಬೆಹಣ್ಣು ರೇವಣ್ಣ ಎಂದೇ ಖ್ಯಾತಿ ಪಡೆದಿರುವ ರಾಜ್ಯ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಟೆಂಪಲ್ ರನ್ ವೇಳೆ ಪತ್ರಕರ್ತರನ್ನು ತೀವ್ರವಾಗಿ ನಿಂದಿಸಿದ್ದಾರೆ.
ಕರ್ನಾಟಕ ರಾಜಕೀಯ ಬಿಕ್ಕಟ್ಟಿನಿಂದ ಸರಕಾರ ಪಾರಾಗಲಿ ಎಂದು ಗುಡಿಗಳನ್ನು ಸುತ್ತುತ್ತಿರುವ ಸಚಿವರು ಕಟೀಲು ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ ನೀಡಿದ ವೇಳೆ ಪತ್ರಕರ್ತರನ್ನು ನಿಂದಿಸಿದ್ದಾರೆ.
ದೇವಸ್ಥಾನದೊಳಗೇ ರೇವಣ್ಣ “ಕಚಡಾ ನನ್ನ ಮಕ್ಳಾ, ನಾಚಿಕೆ ಆಗೊಲ್ಲವಾ?” ಎಂದು ಫೋಟೋ ತೆಗೆಯುತ್ತಿದ್ದ ಹಾಗೂ ವಿಡಿಯೋ ಮಾಡುತ್ತಿದ್ದ ಪತ್ರಕರ್ತರನ್ನು ನಿಂದಿಸಿದ್ದಾರೆ. ಪೊಲೀಸರಿಗೆ ಸೂಚನೆ ನೀಡಿ, ಫೋಟೋ- ವಿಡಿಯೋ ಕೂಡ ಡಿಲೀಟ್ ಮಾಡಿಸಿದ್ದಾರೆ. ಇಷ್ಟೆಲ್ಲ ಆದ ನಂತರ ತರಾತುರಿಯಲ್ಲಿ ಪ್ರಸಾದ ತೆಗೆದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಮೈತ್ರಿ ಸರಕಾರದ ಸ್ಥಿತಿ ಮತ್ತಷ್ಟು ವಿಷಮಗೊಂಡಿರುವುದರಿಂದ ಮತ್ತು ಕಡತ ವಿಲೇವಾರಿ, ಬಡ್ತಿ ಇತ್ಯಾದಿಗಳ ಕುರಿತು ಮಾಧ್ಯಮಗಳ ವರದಿಯಿಂದ ಸಿಟ್ಟಾಗಿರಬಹುದಾದ ರೇವಣ್ಣ ಮಾಧ್ಯಮದವರನ್ನು ನಿಂದಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ