Kannada News

ಚಿಕ್ಕೋಡಿ ವೈದ್ಯರಿಗೆ ಕೊರೊನಾ ವದಂತಿ: ವೈದ್ಯರು ಕೊಟ್ಟ ಸ್ಪಷ್ಟನೆ ಏನು?

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಚಿಕ್ಕೋಡಿ ವ್ಯದ್ಯರೊಬ್ಬರಿಗೆ ಕೊರೊನಾ ಸೋಂಕು ಇದೆ ಎಂಬ ಸುದ್ದಿ ಬೆನ್ನಲ್ಲೇ ಚಿಕ್ಕೋಡಿಯ ಎಲ್ಲ ವೈದ್ಯರು ಸುದ್ದಿಗೋಷ್ಠಿ ನಡೆಸಿ ನಮ್ಮಲ್ಲಿ ಯಾರಿಗೂ ಕೊರೊನಾ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ಸುದ್ದಿಗೋಷ್ಠಿ ನಡೆಸಿದ ವೈದ್ಯರು, ಚಿಕ್ಕೋಡಿಯ ಯಾವುದೇ ವೈದ್ಯರಿಗೆ ಕೊರೊನಾ ಬಂದಿಲ್ಲ. ಈ ಬಗ್ಗೆ ಯಾರು ಸುಳ್ಳು ಸುದ್ದಿ ಹರಡದಂತೆ ಮನವಿ ಮಾಡಿದ್ದಾರೆ.

ಕೊರೊನಾ ಸೋಂಕಿಗೆ ಹೆದರುವ ಅಗತ್ಯವಿಲ್ಲ. ಕೊರೊನಾ ರೀತಿಯೇ ಡೆಂಗ್ಯೂ, ಎಚ್1ಎನ್1 ಸೇರಿದಂತೆ ಅನೇಕ ರೋಗಗಳಿಗೆ ಇನ್ನೂ ಔಷಧಿ ಕಂಡು ಹಿಡಿಯಲು ಆಗಿಲ್ಲ. ಕೇವಲ ಸಪ್ಪೋರ್ಟಿವ್ ಔಷಧಿ ನೀಡಿ ರೋಗಿಗಳನ್ನು ಗುಣಮುಖರನ್ನಾಗಿ ಮಾಡಲಾಗುತ್ತಿದೆ. ಅದೇ ರೀತಿ ಕೊರೊನಾಗೂ ಔಷಧಿ ನೀಡುವುದರಿಂದ ಶೇ. 97 ರೋಗಿಗಳು ಗುಣಮುಖರಾಗುತ್ತಾರೆ ಎಂದು ವೈದ್ಯರು ತಿಳಿಸಿದರು.

Home add -Advt

Related Articles

Back to top button