
ಪ್ರಗತಿವಾಹಿನಿ ಸುದ್ದಿ; ಮುಂಬೈ: ಕಾಂತಾರ ಸಿನೇಮಾ ಕನ್ನಡದಲ್ಲಿ ಯಶಸ್ಸಿನ ಶಿಖರವೇರುತ್ತಿರುವುದರ ಜತೆಗೆ ಹಿಂದಿ, ತೆಲುಗಿನಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಿಷಬ್ ಶೆಟ್ಟಿ ಅವರ ನಟನೆ ಮತ್ತು ನಿರ್ದೇಶನವನ್ನು ದೇಶಾದ್ಯಂತ ಅಭಿಮಾನಿಗಳು ಕೊಂಡಾಡುವಂತಾಗಿದೆ. ಇನ್ನು, ಹಿಂದಿ ಸೇರಿದಂತೆ ಎಲ್ಲ ಭಾಷೆಗಳ ಸುದ್ದಿ ಮಾಧ್ಯಮಗಳು ರಿಷಬ್ ಅವರ ಸಂದರ್ಶನ ನಡೆಸುತ್ತಿದ್ದಾರೆ.
ಈ ನಡುವೆ ಖ್ಯಾತ ಸುದ್ದಿ ವಾಹಿನಿ ಪಿಂಕ್ ವಿಲ್ಲಾ ನಡೆಸಿದ ಸಂದರ್ಶನದಲ್ಲಿ ರಿಷಬ್ ಶೆಟ್ಟಿ ಅವರು ತೆಲುಗಿನ ಖ್ಯಾತ ನಟ ಜ್ಯೂ. ಎನ್‌ಟಿಆರ್ ಅವರ ನಟನೆ ಉಳಿದೆಲ್ಲರ ನಟನೆಗಿಂತ ತುಂಬಾ ಇಷ್ಟವಾಗುತ್ತದೆ ಎಂಬ ಗುಟ್ಟನ್ನು ತೆರೆದಿಟ್ಟಿದ್ದಾರೆ.
ಸಂದರ್ಶಕ ರಿಷಬ್‌ಗೆ ನಿಮಗೆ ತೆಲುಗಿನಲ್ಲಿ ಯಾರು ಇಷ್ಟ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ರಿಷಬ್, ಅಲ್ಲು ಅರ್ಜುನ್, ಪ್ರಭಾಸ್ ಸೇರಿದಂತೆ ಎಲ್ಲರ ನಟನೆಯೂ ಇಷ್ಟ, ಆದರೆ ಜ್ಯೂ. ಎನ್‌ಟಿಆರ್ ಅಂದರೆ ಹೆಚ್ಚು ಇಷ್ಟ ಎಂದಿದ್ದಾರೆ.
ಕಾರಣವೇನು ?
ರಿಷಬ್‌ಗೆ ಜ್ಯೂ. ಎನ್‌ಟಿಆರ್ ಹೆಚ್ಚು ಇಷ್ಟವಾಗಲು ಕಾರಣವೇನು ? ಈ ಪ್ರಶ್ನೆಗೂ ರಿಷಬ್ ಶೆಟ್ಟಿ ಉತ್ತರ ನೀಡಿದ್ದಾರೆ. ಜ್ಯೂ.ಎನ್‌ಟಿಆರ್ ಅವರ ತಾಯಿ ಕುಂದಾಪುರದವರು. ರಿಷಬ್ ಶೆಟ್ಟಿ ಸಹ ಕುಂದಾಪುರದವರು. ಹಾಗಾಗಿ ತಮ್ಮೂರು ಜ್ಯೂ. ಎನ್‌ಟಿಆರ್ ಅವರ ತಾಯಿಯ ತವರು ಎಂಬ ಕಾರಣಕ್ಕೆ ಅವರು ರಿಷಬ್‌ಗೆ ಹೆಚ್ಚು ಇಷ್ಟವಾಗಿದ್ದಾರಂತೆ.
ಸ್ಟಂಪ್ ಮೈಕ್ ನಲ್ಲಿ ಸೆರೆಯಾಯ್ತು ಸೂರ್ಯಕುಮಾರ್ ಔಟಾಗುವ ಕ್ಷಣ ಮೊದಲು ಹೇಳಿದ ಮಾತು
https://pragati.taskdun.com/latest/suryakumar-yadhavvoice-recodedstump-mic-before-he-got-out/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ