Kannada NewsLatest

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಎದುರು ಮಂಡಿಯೂರಿ ಕುಳಿತ ರಿಷಿ; ವಿಧೇಯತೆಗೆ ಶಾಬ್ಬಾಸ್ ಎಂದ ನೆಟ್ಟಿಗರು

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಯಾವ ಹುದ್ದೆಯಾದರೇನು? ಅಲ್ಲಿ ಹೆಚ್ಚು ಗಣನೆಗೆ ಬರುವುದು ಗುಣಾವಗುಣಗಳು. ಅಂದಹಾಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಕುರ್ಚಿಯಲ್ಲಿ ಕುಳಿತಿದ್ದ ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ಎದುರು ನೆಲದಲ್ಲೇ ಮಂಡಿಯೂರಿ ಕುಳಿತು ಮಾತನಾಡಿಸಿರುವ ವಿಡಿಯೊವೊಂದು ಸಖತ್ ವೈರಲ್ ಆಗಿದ್ದು, ರಿಷಿ ವಿಧೆಯತೆಗೆ ನೆಟ್ಟಿಗರು ಶಾಬ್ಬಾಸ್ ಎಂದಿದ್ದಾರೆ.

ಜಿ20 ಶೃಂಗಸಭೆಗೆ ಆಗಮಿಸಿದ್ದ ಗಣ್ಯರೆಲ್ಲ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು. ಇದೇ ವೇಳೆ ಶೇಖ್ ಹಸೀನಾ ಅವರ ಬಳಿ ಹೋದ ರಿಷಿ ತಮಗೊಂದು ಕುರ್ಚಿ ಕೇಳಲಿಲ್ಲ. ಬದಲಾಗಿ ಅವರ ಕುರ್ಚಿ ಪಕ್ಕ ನೆಲದಲ್ಲೇ ಮಂಡಿಯೂರಿ ಅಮ್ಮನೆದುರು ಮಗನಂತೆ ಕುಳಿತು ಮಾತನಾಡಿಸಿದ್ದು ವಿಶೇಷವೆನಿಸಿತ್ತು.

Home add -Advt

ಪ್ರಬಲ ರಾಷ್ಟ್ರವೊಂದರ ಪ್ರಧಾನಿಯಾದರೂ ಹಮ್ಮು, ಬಿಮ್ಮು ಬಿಟ್ಟು ನಡೆದುಕೊಳ್ಳುವ ಅವರ ಸರಳ, ಸಾಮಾನ್ಯ, ಡಂಭಾಚಾರ ರಹಿತ ಗುಣವೀಗ ಜಾಗತಿಕ ಮಟ್ಟದಲ್ಲಿ ಶ್ಲಾಘನೆಗೆ ಒಳಗಾಗಿದ್ದು ಮಾದರಿಯೂ ಆಗಿದೆ.

Related Articles

Back to top button