Latest

ಸ್ಪೆಲ್ಲಿಂಗ್ ಮಿಸ್ಟೇಕ್ !; ಟೀಕೆಗೆ ಗುರಿಯಾದ ಯುಕೆ ಪ್ರಧಾನಿ ಸ್ಥಾನದ ಅಭ್ಯರ್ಥಿ

ಪ್ರಗತಿವಾಹಿನಿ ಸುದ್ದಿ, ಲಂಡನ್: ಇಂಗ್ಲೆಂಡ್ ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸಿ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದ ರಿಷಿ ಸುನಕ್  ಚುನಾವಣೆ ಪ್ರಚಾರದ ಬ್ಯಾನರ್ ನಲ್ಲಿ ಇಂಗ್ಲಿಷ್ ಸ್ಪೆಲ್ಲಿಂಗ್ ತಪ್ಪಾಗಿ ಬರೆದಿರುವುದು ನೆಟ್ಟಿಗರ ವ್ಯಾಪಕ ಟೀಕೆಗೆ ಗುರಿಯಾಗಿದೆ.

ರಿಷಿ ಸುನಕ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಚುರಪಡಿಸಿದ್ದ Campaign ಎಂಬ ಶಬ್ದವನ್ನು ‘campiagn’ ಎಂದು ಬರೆದಿರುವ ಪೋಸ್ಟರ್ ಎಲ್ಲೆಡೆ ವೈರಲ್ ಆಗಿತ್ತು. ಇದಕ್ಕೆ ನೆಟ್ಟಿಗರು ರಿಷಿ ಅವರನ್ನು  ತೀವ್ರ ಟೀಕೆಗಳ ಮೂಲಕ ತಿವಿದಿದ್ದರು.

Home add -Advt

ಭಾರೀ ಟೀಕಾಸ್ತ್ರಗಳ ಪ್ರಯೋಗದ ನಂತರ ಇದಕ್ಕೆ ಪ್ರತಿಕ್ರಿಯಿಸಿದ ರಿಷಿ ಸುನಕ್ “Ready for spellcheck” (ಸ್ಪೆಲ್ಲಿಂಗ್ ಪರಿಶೀಲಿಸಲು ತಾವು ಸಿದ್ಧ) ಎಂದು ಹೇಳಿಕೊಂಡಿದ್ದಾರೆ.

ಇನ್ಫೋಸಿಸ್ ನಾರಾಯಣಮೂರ್ತಿ, ಸುಧಾಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿಯವರನ್ನು ವಿವಾಹವಾಗಿರುವ ರಿಷಿ ಸುನಕ್ ಇಂಗ್ಲೆಂಡ್  ಮಹಾರಾಣಿಗಿಂತಲೂ ಶ್ರೀಮಂತರೆನಿಸಿದ್ದು ಇದೀಗ ಇಂಗ್ಲೆಂಡ್ ಪ್ರಧಾನಿ ಪಟ್ಟದ ಸ್ಪರ್ಧಿಯಾಗಿ ಕಣದಲ್ಲಿದ್ದಾರೆ.

ಗಾಯಕ ರಿಕಿ ಮಾರ್ಟಿನ್ ಈಗ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ

 

Related Articles

Back to top button