Kannada NewsKarnataka NewsLatest

​2 ದಶಕದ ನಂತರ ಅಭಿವೃದ್ದಿ ಕಂಡ ರಸ್ತೆಗಳು

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮತ್ತೊಂದು ಸಾಧನೆ​
ಪ್ರಗತಿವಾಹಿನಿ ಸುದ್ದಿ, ​ಬೆಳಗಾವಿ – 20 ವರ್ಷಗಳಿಂದ ಅಭಿವೃದ್ಧಿಯನ್ನೇ ಕಾಣದೆ ಜನರ ಸಂಕಷ್ಟಕ್ಕೆ ಕಾರಣವಾಗಿದ್ದ ರಸ್ತೆಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮತ್ತೊಂದು​ ಸಾಧನೆ ಮಾಡಿದ್ದಾರೆ.
​ಬೆಳಗಾವಿ ನಗರಕ್ಕೆ ಹೊಂದಿಕೊಂಡಂತಿರುವ ಹಲಗಾ-ಬಸ್ತವಾಡ ಗ್ರಾಮಗಳ ರಸ್ತೆಗಳು​ 2 ದಶಕದಿಂದ ಅಭಿವೃದ್ಧಿಯಾಗಿರಲಿಲ್ಲ. ಈ ಹಿಂದೆ ಅಧಿಕಾರದಲ್ಲಿದ್ದ ಜನಪ್ರತಿನಿಧಿಗಳು 3-4 ಬಾರಿ ಪೂಜೆಯನ್ನು ನೆರವೇರಿಸಿ​ದ್ದರೂ​ ಕಾಮಗಾರಿಗಳು ಕಾರ್ಯರೂಪಕ್ಕೆ ​ಬಂ​ದಿರಲೇ ಇಲ್ಲ.​ ​ಹಾಗಾಗಿ ಇಲ್ಲಿಯ ಜನರು ಜನಪ್ರತಿನಿಧಿಗಳ ಮೇಲಿನ ವಿಶ್ವಾಸವನ್ನೇ ಕಳೆದುಕೊಂಡಿದ್ದರು. 
ಜೊತೆಗೆ​,​ ಹಲಗಾ ಗ್ರಾಮದಲ್ಲಿ ಮೈನಾರಿಟಿ ಫಂಡ್ ವತಿಯಿಂದ ಒಟ್ಟು 30 ಲಕ್ಷ ರೂ​.​ಗಳ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣದ ಕಾಮಗಾರಿಗಳಿಗೆ​ ಸಹ ಇದೇ ವೇಳೆ​ ಭೂಮಿ ಪೂಜೆಯ ಮೂಲಕ ಚಾಲನೆಯನ್ನು ನೀಡಲಾಯಿತು.
​ ಈ ಬಗ್ಗೆ ಗಂಭೀರ ಗಮನ ಹರಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ​ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ವತಿಯಿಂದ ​60 ಲಕ್ಷ​ ರೂ.​ ಹಾಗೂ ಲೋಕೋಪಯೋಗಿ ಇಲಾಖೆಯ ವತಿಯಿಂದ ​30 ಲಕ್ಷ​ ರೂ. ಸೇರಿಸಿ​ ಒಟ್ಟು ​ 90 ಲಕ್ಷ ರೂ​.​ಗಳ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗಳಿಗೆ​ ಅನುಮೋದನೆ ಪಡೆದರು. ಅಷ್ಟೇ ಅಲ್ಲ, ಭೂಮಿ ಪೂಜೆಯೊಂದಿಗೆ​ ಕಾಮಗಾರಿಗೆ​ ಚಾಲನೆಯನ್ನು​ ಸಹ​ ನೀಡಲಾಯಿತು.
​ಈ ವೇಳೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳಕರ್, ನಾನು ಅಭಿವೃದ್ಧಿ ವಿಷಯದಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ. ಇಡೀ ಕ್ಷೇತ್ರ ಅಭಿವೃದ್ಧಿಯಾಗಬೇಕು. ಜನರ ಸಂಕಷ್ಟ ದೂರವಾಗಬೇಕು ಎನ್ನುವುದಷ್ಟೆ ನನ್ನ ಗುರಿ. ಹಿಂದಿನವರು ಏಕೆ ಮಾಡಿಲ್ಲ ಎನ್ನುವುದನ್ನೆಲ್ಲ ನಾನು ಕೆದಕುತ್ತ ಹೋಗುವುದಿಲ್ಲ. ಎಲ್ಲರ ಸಹಕಾರದಿಂದ ಕ್ಷೇತ್ರವನ್ನು ಹೊಸದಿಕ್ಕಿನತ್ತ ಕೊಂಡೊಯ್ಯೋಣ. ನಿಮ್ಮ ಪ್ರೋತ್ಸಾಹವಿದ್ದರೆ ಎಲ್ಲವನ್ನೂ ಸಾಧ್ಯ ಮಾಡಿ ತೋರಿಸುತ್ತೇನೆ ಎಂದು ಭರವಸೆ ನೀಡಿದರು.​
​ಈ ಸಂದರ್ಭದಲ್ಲಿ ಆಯಾ ಗ್ರಾಮಗಳ ಹಿರಿಯರು, ಗ್ರಾಮ ಪಂಚಾಯತಗಳ ಅಭಿವೃದ್ಧಿ​ ಅಧಿಕಾರಿಗಳು, ಅಧ್ಯಕ್ಷ​,​ ಉಪಾಧ್ಯಕ್ಷರು, ಸದಸ್ಯರು, ಗುಂಡು ಚೌಗುಲೆ, ಮನೋಹರ ಬಾಂಡ್ಗೆ, ಕೇಶವ ಚೌಗುಲೆ, ನಿಂಗಪ್ಪ ಚೌಗುಲೆ, ಭರತೇಶ ಸಂಕೇಶ್ವರಿ, ರಾಮಾ ಚೌಗುಲೆ, ಬ​ಶೀ​ರ ಕಿಲ್ಲೇವಾಲೆ, ಮಾ​ಣಿ​ಕ್ ಸಂಕೇಶ್ವರ, ಸಂಜು ಬಡಚಿ, ರಾಜು ಬಡವನ್ನವರ, ಮಹಾವೀರ ಪಾಟೀಲ, ಕಿರಣ ಹನಮಂತಾಚೆ, ಸಾಗರ, ಶಿವಕುಮಾರ ಹುಡೇದ, ಮಹಾವೀರ ಬೆಲ್ಲದ, ಘೋರ್ಪಡೆ ವಕೀಲರು, ಯಲ್ಲಪ್ಪ ಸಾಮಜಿ, ಶಾಂತು ಬೆಲ್ಲದ, ಪ್ರಶಾಂತ ಶಟವಾಜಿ, ಪಿರಾಜಿ, ಜ್ಯೋತಿಬಾ, ಮಹಿಳಾ ಕಾರ್ಯಕರ್ತೆಯರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button