Kannada NewsKarnataka News

*ಬಂಗಾರ ನೀಡುವುದಾಗಿ‌ ವಂಚಿಸಿ ದರೋಡೆ: ಐವರು ಆರೋಪಿಗಳ ಬಂಧನ*

ಪ್ರಗತಿವಾಹಿನಿ ಸುದ್ದಿ: ಬಂಗಾರ ನೀಡುವುದಾಗಿ ನಂಬಿಸಿ, ವಂಚಿಸಿ ದರೋಡೆ ಮಾಡಿದ್ದ‌‌ ಐವರು ಆರೋಪಿಗಳನ್ನು ಬಂಧಿಸಿ 7 ಲಕ್ಷ 63 ಸಾವಿರ ನಗದು ಹಾಗೂ‌ 3 ಬೈಕನ್ನು ಶಿರಸಿ ವೃತ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗ ಜಿಲ್ಲೆಯ ನಾಗಪ್ಪ ದೊಡ್ಡನಾರಾಯಣ ಕೋರ್ಚರ್, ಅವಿನಾಶ್ ಕೊಟ್ರೇಶ್, ನಿಸ್ಸಾರ ಮೊಹಮ್ಮದ್ ಜಾಫರ್, ಸಂಜೀವ ಕೆ ಆರ್ ರಾಮಣ್ಣ ಕೋರ್ಚರ್ ಹಾಗೂ ಕೃಷ್ಣಪ್ಪ ಯಾನೆ ಕೃಷ್ಣಮೂರ್ತಿ ನಾಯ್ಕ್ ಬಂಧಿತ ಆರೋಪಿಗಳಾಗಿದ್ದಾರೆ.

ಆಗಸ್ಟ್  4 ರಂದು ಸಚಿನ್ ಶಿವಾಜಿ ಗಾಯಕವಾಡ ( 33 ವರ್ಷ, ಬಂಗಾರದ ಕೆಲಸ, ಮಲಪುರಂ ಕುಪುರಂ ಕೇರಳ) ಅವರನ್ನು 8 ಜನ ಆರೋಪಿತರ ಪೈಕಿ ಒಬ್ಬ ಅಂಗವಿಕಲ ವ್ಯಕ್ತಿಯು ಬಂಗಾರ ಕೊಡುವುದಾಗಿ ಹೇಳಿ ವಿಶ್ವಾಸದಿಂದ ಮಾತನಾಡಿ 800 ಮೀಲಿ ಬಂಗಾರ ನೀಡಿದ್ದು‌ ಅದನ್ನು ಸಚಿನ್  ಊರಿಗೆ ಹೋಗಿ ಪರೀಕ್ಷಿಸಿ ನೋಡಿ ಬಂಗಾರ ಎಂದು ಖಚಿತಗೊಂಡು ಆರೋಪಿತನಿಗೆ ಕರೆ ಮಾಡಿ ಬಂಗಾರ ಬೇಕೇಂದು ಹೇಳಿದಾಗ ಆರೋಪಿತನು ಶಿರಸಿ-ಹಾನಗಲ್ ರಸ್ತೆಯಲ್ಲಿರುವ ಮಳಗಾಂವ ಬಸ್ ನಿಲ್ದಾಣ ಹತ್ತಿರ ಬರಲು ತಿಳಿಸಿದ್ದರು.

ಆಗಸ್ಟ್ 4 ರಂದು ಬೆಳಿಗ್ಗೆ 11:45 ಗಂಟೆಗೆ ಆರೋಪಿತನು ತಿಳಿಸಿದ ಜಾಗಕ್ಕೆ‌ ಸಚಿನ್ ಹಾಗೂ ಜೊತೆಗೆ ವಿಷ್ಣು (ತಂದೆ ನಾರಾಯಣನ,  33 ವರ್ಷ,  ಹೊಟೆಲ್ ಕೆಲಸ, ಮಲಪುರಂ ಕುಟ್ಟಿಪುರಂ ಕೇರಳ) ಬಂದಾಗ, ಇಲ್ಲಿ ಹಣ ಲೆಕ್ಕ ಮಾಡುವುದು ಹಾಗೂ ಬಂಗಾರ ಚೆಕ್ ಮಾಡುವುದು ಬೇಡ .ಸ್ವಲ್ಪ ಒಳಗೆ ಹೋಗೋಣ ಎಂದು ಹತ್ತಿರದ  ಕಾಡಿನ ಒಳಗೆ ಕರೆದುಕೊಂಡು ಹೋಗಿ ತಂದ ಹಣವನ್ನು ತೋರಿಸಲು ಹೇಳಿದ್ರು. ಆರೋತನು ಪಿರ್ಯಾದಿಯವರ ಬ್ಯಾಗನಿಂದ ಹಣ ತೆಗೆದು ಚೀಲದಲ್ಲಿ ಇಟ್ಟುಕೊಂಡು  ಜೋರಾಗಿ ಹಣ ಸಿಕ್ಕಿದೆ ಅಂತಾ ಹಿಂದಿಯಲ್ಲಿ ಹೇಳಿದಾಗ ಅಷ್ಟರಲ್ಲಿ ಸಚಿನ್ ಎಡ ಬಲ ಕಡೆಯಿಂದ ಇನ್ನೂಳಿದ ಜನರು ಕೈಯಲ್ಲಿ ಕಟ್ಟಿಗೆಯನ್ನು ಹಿಡಿದುಕೊಂಡು ಒಟ್ಟೂ 9‌ಲಕ್ಷದ 11000‌ರೂಪಾಯಿಗಳನ್ನು ತೆಗೆದುಕೊಂಡು ಬಂಗಾರವನ್ನು ನೀಡದೇ  ಹೊಡೆದು ಹೆದರಿಸಿ‌ ಕಿಸೆಯಲ್ಲಿದ್ದ  4000 ನಗದು ಹಣ ಹಾಗೂ ಐಪೋನ 14 ಮಾದರಿಯ ಮೊಬೈಲ್‌ನ್ನು ಕಿತ್ತುಕೊಂಡಿದ್ದರು. ಹಾಗೂ ವಿಷ್ಣು ಹತ್ತಿರ ಇದ್ದ 7000 ರೂಪಾಯಿ ನಗದು ಹಣ ಹಾಗೂ ಒಂದು ನೊಕಿಯಾ ಮೊಬೈಲನ್ನು ಕಿತ್ತುಕೊಂಡಿದ್ರು. ಆರೋಪಿಗಳ ಬಂಧನಕ್ಕೆ ಶಿರಸಿ ವೃತ್ತ ಪೋಲೀಸರು ಮೂರು ಪ್ರ್ಯತ್ಯೇಕ ತಂಡಗಳನ್ನು ರಚಿಸಿ  ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ‌.

ಎಸ್ಪಿ ಎಂ ನಾರಾಯಣ್ ಹಾಗೂ ಸಿ ಟಿ ಜಯಕುಮಾರ್ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಗಣೇಶ್ ಕೆ ಎಲ್ ಮತ್ತು ಸಿಪಿಐ ಶಶಿಕುಮಾರ್ ವರ್ಮಾ  ನೇತೃತ್ವದಲ್ಲಿ ಪಿಎಸೈ ಹಾಗೂ‌ ಸಿಬ್ಬಂದಿಗಳಿಂದ ಕಾರ್ಯಾಚರಣೆ ನಡೆದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button