ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯ ಕೆಎಲ್ಇ ಇಎಸ್ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಇಬ್ಬರಿಗೆ ರೊಬೋಟ್ ನಿಂದ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
ತನ್ಮೂಲಕ ರೊಬೋಟ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅವಡಿಸಿಕೊಂಡ ಈ ಭಾಗದ ಮೊದಲ ಆಸ್ಪತ್ರೆ ಎನ್ನುವ ಕೀರ್ತಿಗೆ ಕೆಎಲ್ಇ ಆಸ್ಪತ್ರೆ ಪಾತ್ರವಾಗಿದೆ.
ವೈದ್ಯವಿಜ್ಞಾನದ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಅದಕ್ಕೆ ತಕ್ಕಂತೆ ಆಸ್ಪತ್ರೆಗಳೂ ಕೂಡ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿವೆ. ವೈದ್ಯಕೀಯ ವಿಜ್ಞಾನದಲ್ಲಿ ನಿಖರವಾದ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲು ರೊಬೊಟಿಕ್ ತಂತ್ರಜ್ಞಾನ ಸಾಕಷ್ಟು ಸಹಕಾರಿಯಾಗಿದೆ. ಈ ತಂತ್ರಜ್ಞಾನವನ್ನು ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಅಳವಡಿಸಲಾಗಿದೆ. ಅಲ್ಲದೇ ರೊಬೊಟ್ ನಿಂದ ಇಬ್ಬರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.
ಬೆಳಗಾವಿಯಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿ ಈ ವಿಷಯವನ್ನು ತಿಳಿಸಿದ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಅವರು, ಕಳೆದ ಮೂರು ದಶಕಗಳ ಹಿಂದೆ ವೈದ್ಯವಿಜ್ಞಾನದ ತಂತ್ರಜ್ಞಾನಕ್ಕೆ ಪರಿಚಿತವಾದ ರೊಬೊಟಿಕ್ ಇಂದು ಕ್ರಾಂತಿಕಾರಿ ತಂತ್ರಜ್ಞಾನವಾಗಿದೆ. ಶಸ್ತ್ರಚಿಕಿತ್ಸೆಯಲ್ಲಿ ಅದ್ಭುತ ಕೊಡುಗೆ ನೀಡುತ್ತ ನಿರಂತರವಾಗಿ ಅಭಿವೃದ್ದಿಗೊಳ್ಳುತ್ತಿದೆ. ರೊಬೊಟಿಕ್ ನಿಂದ ವೈದ್ಯರು ಅತ್ಯಂತ ಕ್ಲಿಷ್ಟಕರವಾದ ಹಾಗೂ ಸಂಕೀರ್ಣತೆಯಿಂದ ಕೂಡಿದ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಲು ಸಹಕಾರಿಯಾಗಲಿದೆ ಎಂದರು.
ಈಗಾಲೇ ರೊಬೊಟಿಕ್ ತಂತ್ರಜ್ಞಾನವನ್ನು ವಿವಿಧ ಕೈಗಾರಿಕೆಗಳಲ್ಲಿ ಬಳಸಲಾಗುತ್ತಿದೆ. ಕಳೆದ ಎರಡು ದಶಕಗಳಲ್ಲಿ ರೊಬೊಟಿಕ್ ತಂತ್ರಜ್ಞಾನವು ಆರೋಗ್ಯ ಕ್ಷೇತ್ರದಲ್ಲೂ ವಿಶ್ವಾರ್ಹತೆಯನ್ನು ಗಳಿಸುತ್ತಿದೆ. ರೊಬೊಟಿಕ್ ಶಸ್ತ್ರಚಿಕಿತ್ಸೆಯ ವಿಧಾನವು ನಿರಂತರವಾಗಿ ಅಭಿವೃದ್ದಿಗೊಳ್ಳುತ್ತಲಿದೆ. ರೊಬೊಟ್ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ವೈದ್ಯರಿಗೆ ನೀಡುವದು, ಅತ್ಯಂತ ಸಂಕೀರ್ಣವಾದ ಶಸ್ತ್ರಚಿಕಿತ್ಸಾ ವಿಧಾನಗಳನ್ನು ನಿರ್ವಹಿಸುವುದು ಸೇರಿದಂತೆ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ. ರೊಬೊಟಿಕ್ ಸಹಕಾರದಿಂದ ನೆರವೇರಿಸುವ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯು ಅತ್ಯಂತ ಪರಿಣಾಮಕಾರಿ ಎಂದು ಕಂಡು ಬಂದಿದೆ. ರೊಬೊಟಿಕ್ ಶಸ್ತ್ರಚಿಕಿತ್ಸೆಯು ಲ್ಯಾಪ್ರೊಸ್ಕೋಪಿಕ್ ಮತ್ತು ತೆರೆದ ಶಸ್ತ್ರಚಿಕಿತ್ಸೆ ಎರಡಕ್ಕೂ ಸೈ ಎನಿಸಿಕೊಂಡಿದೆ.
- ನಿಖರತೆ: 3ಡಿ ತಂತ್ರಜ್ಞಾನ, ಹೈಡೆಪಿನೇಶನ್ ಕ್ಯಾಮರಾ ಹಾಗೂ ಅತ್ಯಾಧುನಿಕ ಉಪರಣಗಳನ್ನು ಹೊಂದಿರುವುದರಿಂದ ಶಸ್ತ್ರಚಿಕಿತ್ಸೆಯ ಸ್ಥಳವನ್ನು ನಿಖರವಾಗಿ ತಲುಪಬಹುದು. ಇದರಿಂದ ಅತ್ಯಂತ ಸಂಕೀರ್ಣತೆಯಿಂದ ಕೂಡಿದ ಶಸ್ತ್ರಚಿಕಿತ್ಸೆಯನ್ನು ಸುಲಭವಾಗಿ ನೆರವೇರಿಸಲು ಸಹಕರಿಸುತ್ತದೆ.
2. ಕಡಿಮೆ ಗಾಯ: ತೆರೆದ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ, ರೊಬೊಟಿಕ್ ಶಸ್ತ್ರಚಿಕಿತ್ಸೆಗೆ ಸಣ್ಣ ರಂದ್ರದ ಅಗತ್ಯವಿರುತ್ತದೆ. ಇದರಿಂದ ಸುತ್ತಮುತ್ತಲಿನ ಅಂಗಾಂಶಗಳಿಗೆ ಕಡಿಮೆ ತೊಂದರೆಯುಂಟಾಗುತ್ತದೆ. ಅಲ್ಲದೇ ರಕ್ತಸ್ರಾವ ಕಡಿಮೆಗೊಂಡು, ರೋಗಿಗಳು ಶೀಘ್ರವಾಗಿ ಗುಣಮುಖಗೊಳ್ಳುತ್ತಾರೆ.
3. ಸುಧಾರಿತ ದಕ್ಷತೆ : ರೊಬೊಟಿಕ್ ತಂತ್ರಜ್ಞಾನವು ಶಸ್ತ್ರಚಿಕಿತ್ಸಕರಿಗೆ ಸಾಂಪ್ರದಾಯಿಕ ಲ್ಯಾಪ್ರೊಸ್ಕೋಪಿಕ್ ಉಪಕರಣಕ್ಕಿಂತ ಹೆಚ್ಚು ಸಹಕಾರಿಯಾಗಿದೆ. ಮತ್ತು ದೀರ್ಘಾವಧಿವರೆಗಿನ ಶಸ್ತ್ರಚಿಕಿತ್ಸೆಗಳನ್ನು ಅನಾಯಾಸವಾಗಿ ನೆರವೇರಿಸುವದರಿಂದ ಶಸ್ತ್ರಚಿಕಿತ್ಸಕರ ಮೆಲಿನ ದೈಹಿಕ ಒತ್ತಡವನ್ನು ಕಡಿಮೆ ಮಾಡಲಿದೆ.
4. ತೆರೆದ ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳಿಗೆ ಹೋಲಿಸಿದರೆ ರೋಬೋಟಿಕ್ ಶಸ್ತ್ರಚಿಕಿತ್ಸೆಗೊಳಗಾದ ರೋಗಿಗಳಲ್ಲಿ ಸೋಂಕಿನ ಅಪಾಯ ಕಡಿಮೆಯಿದ್ದು, ಶೀಘ್ರ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಾರೆ. ಅಲ್ಲದೇ
ಲ್ಯಾಪ್ರೊಸ್ಕೋಪಿಕ್ ಮತ್ತು ತೆರೆದ ಶಸ್ತ್ರಚಿಕಿತ್ಸಾ ವಿಧಾನಗಳಿಗಿಂತ ಹೆಚ್ಚಿನ ಸಂದರ್ಭಗಳಲ್ಲಿ ಇದನ್ನು ಆದ್ಯತೆಯನ್ನಾಗಿ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ. ರೊಬೊಟಿಕ್ ಶಸ್ತ್ರಚಿಕಿತ್ಸೆಯು ರೋಗಿಗಳ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರಿದರೂ ಕೂಡ ಮೂಲಸೌಕರ್ಯ, ಉಪಕರಣಗಳ ಆಮದು ವೆಚ್ಚದಿಂದಾಗಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ನಿಧಾನಗತಿ ಇದೆ.
ಉತ್ತರ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ರೊಬೊಟಿಕ್ ತಂತ್ರಜ್ಞಾನವನ್ನು ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವು ಅಳವಡಿಸಿಕೊಂಡಿದೆ. ಭಾರತದಲ್ಲಿಯೇ ತಯಾರಿಸಿದ ಎಸ್ಎಸ್ಐ ತಂತ್ರಜ್ಞಾನ ಸರ್ಜಿಕಲ್ ರೊಬೊಟಿಕ್ ಇದಾಗಿದ್ದು, ಅತ್ಯಂತ ನಿಖರತೆಯಿಂದ ಕೂಡಿದ ಶಸ್ತ್ರಚಿಕಿತ್ಸೆಯನ್ನು ನೆರವೇರಿಸುವಲ್ಲಿ ಸಹಕಾರಿಯಾಗಿದೆ.
ರೊಬೊಟಿಕ್ ತಂತ್ರಜ್ಞಾನದಿಂದ ಇಬ್ಬರು ಕ್ಯಾನ್ಸರ್ ರೋಗಿಗಳಿಗೆ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಾಗಿದೆ. ಅನ್ನನಾಳ ಕ್ಯಾನ್ಸರ್ ನಿಂದ ಬಳಲುತ್ತಿದ್ದ 62 ಮತ್ತು 70 ವರ್ಷದ ರೋಗಿಗಳಿಗೆ ಸುಮಾರು 8 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ಕ್ಯಾನ್ಸರ್ ಶಸ್ತ್ರಚಿಕಿತ್ಸಕರಾದ ಡಾ. ಮಹೇಶ ಕಲ್ಲೋಳ್ಳಿ, ಡಾ. ಕುಮಾರ ವಿಂಚುರಕರ ಹಾಗೂ ಡಾ. ದಿವಾಕರ, ಡಾ. ರಾಹುಲ್ ಕಿನವಾಡೆಕರ ಅವರಿಗೆ ಅರವಳಿಕೆ ತಜ್ಞವೈದ್ಯರಾದ ಡಾ. ರಾಜೇಶ ಮಾನೆ ಅವರು ಸಹಕರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಯಾನ್ಸರ್ ತಜ್ಞವೈದ್ಯರಾದ ಡಾ. ಕುಮಾರ ವಿಂಚುರಕರ ಹಾಗೂ ಡಾ. ಮಹೇಶ ಕಲ್ಲೋಳ್ಳಿ ಅವರು ಉಪಸ್ಥಿತರಿದ್ದರು.
KLES Dr. Prabhakar Kore Hospital & MRC, Belagavi
We are pleased to present a heartwarming success story of our First Robotic Surgery in North Karnataka. We did robotic assisted esophagectomy on 10-07-2024 on 62 year old Male patient from Naragund, Said Dr. Dayanand, MD, KLES Dr.Prabhakar Kore Hospital and Research center.
In a landmark achievement for the medical community in the surgical team successfully performed a Robotic Radical Nephrectomy on a 70-year-old female patient using the SSI Mantra Surgical Robotic System. This milestone is not just a surgical triumph; it represents a beacon of hope in medicine for patients in tier-two cities who have long been underserved.
Robotic surgery is quite a revolutionary technology and holds significant promise in medical science with both real and potential advantages. Surgical robotics saw light in the 90s and with a slow pick up, it is on an ever-evolving journey towards surgical wonders.
We all know that robotic technology has been widely utilized in various industries, but over the last couple of decades, this technology has gained great acceptability in healthcare sector too. The application of robotic surgery has been evolving constantly. From performing a variety of menial tasks, like handing over operative instruments, to operating the most complex surgical procedures, Robotic surgery is a promising surgical alternative that has advanced by leaps and bounds over the last few decades.
Robotic-assisted surgery is regarded as the benchmark treatment for many oncological and other surgeries, and is now highly recommended for patients with these medical conditions.
Robotic surgery has several advantages over both laparoscopic and open surgery:
1. **Precision and Accuracy**: Robotic systems offer enhanced precision due to the use of tiny instruments and high-definition cameras that provide a magnified, 3D view of the surgical site. This allows surgeons to perform delicate procedures with greater accuracy.
2. **Less Invasive**: Compared to open surgery, robotic surgery requires smaller incisions. This results in less trauma to surrounding tissues, reduced blood loss, and faster recovery times for patients.
3. **Improved Dexterity**: Robotic systems enable surgeons to maneuver instruments in ways that may not be possible with traditional laparoscopic tools, thanks to the wrist-like movement capability of robotic arms.
4. **Reduced Fatigue**: Unlike laparoscopic surgery, where surgeons must hold and manipulate instruments for extended periods, robotic surgery allows for more ergonomic positioning and reduced physical strain on surgeons.
5. **Better Visualization**: The high-definition 3D view and magnification provided by robotic systems enhance visualization of the surgical field, allowing for more precise tissue dissection and suturing.
6. **Shorter Hospital Stays**: Patients undergoing robotic surgery often experience shorter hospital stays compared to those undergoing open surgery, as they recover more quickly and experience fewer complications.
7. **Quicker Recovery**: With smaller incisions and less trauma to tissues, patients typically recover faster after robotic surgery, returning to normal activities sooner.
8. **Reduced Risk of Infection**: Smaller incisions in robotic surgery decrease the risk of infections compared to open surgery, where larger wounds are more susceptible to contamination.
Overall, robotic surgery represents a significant advancement in surgical technology, offering numerous benefits that make it preferable in many cases over laparoscopic and open surgery methods.
Though robotics-assisted surgery has yielded significantly better results and has been positively impacting patients globally, the access to it is still scarce. The cost of infrastructure, import cost of equipment, steep learning curve and high maintenance of equipment, contribute to the high treatment cost.
This is where the need for an affordable advanced surgical robotic system arise and SSI Mantra ( the one which KLE Hospital has ) came into existence. Being a ‘Made in India ‘surgical robotic system, SSI Mantra delivers affordable minimally invasive robotic surgical solutions with the most advanced global technologies. Robotics will be the future of surgery.
This was first robotic surgery in north Karnataka. Patient recovered very well without any complication. The surgery lasted a remarkable 8 hours, lead by our team of Oncosurgeon Dr. Kumar Vinchurkar, Dr Mahesh Kalloli, Dr Diwakar, Dr. Rahul Kinwadekar , Anesthesiologists Dr Rajesh Mane & team.
Embracing the advancements in technology with Robotic surgery, we eagerly anticipate the promising future for all the patients in this region at Dr Prabhakar Kore Hospital & KLE new Cancer Hospital.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ