Kannada NewsKarnataka NewsLatest
*ಹೈಟೆಕ್ ವೇಶ್ಯಾವಾಟಿಕೆ; ರೆಸಾರ್ಟ್ ಮೇಲೆ ದಾಳಿ; 14 ಜನರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಕೋಲಾರ: ರಾಕ್ ವ್ಯಾಲಿ ರೆಸಾರ್ಟ್ ಮೇಲೆ ದಾಳಿ ನಡೆಸಿರುವ ಪೊಲೀಸರು ಹೈಟೆಕ್ ವೇಶ್ಯಾವಾಟಿಕೆಯಲ್ಲಿತೊಡಗಿದ್ದ 14 ಜನರನ್ನು ಬಂಧಿಸಿದ್ದಾರೆ.
ಕೋಲಾರದ ಮುಳಬಾಗಿಲು ತಾಲೂಕಿನ ರಾಕ್ ವ್ಯಾಲಿ ರೆಸಾರ್ಟ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ಕೋಲಾರ ಮಹಿಳಾ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಬೈರರಾಮಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
14 ಜನರನ್ನು ಬಂಧಿಸಿರುವ ಪೊಲೀಸರು 6 ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. ಬೈರಕೂರು ಗ್ರಾಮದಲ್ಲಿದ್ದ ರೆಸಾರ್ಟ್ ಗೆ ಹೈದರಾಬಾದ್ ಮೂಲದ ಅಜಯ್ ಮಹಿಳೆಯರನ್ನು ಕರೆದುಕೊಂಡು ಬಂದು ವೇಶ್ಯಾವಟಿಕೆ ನಡೆಸುತ್ತಿದ್ದ. ದಾಳಿಯಲ್ಲಿ ಹೈದರಾಬಾದ್ ಮೂಲದ 6 ಮಹಿಳೆಯರನ್ನು ರಕ್ಷಿಸಲಾಗಿದ್ದು 10ಕ್ಕೂ ಹೆಚ್ಚು ಕಾರು ವಶಕ್ಕೆ ಪಡೆಯಲಾಗಿದೆ.




