ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಜೈಲಿನಲ್ಲಿ ವಿಚಾರಣಾಧೀನ ಕೈದಿ ಬಸನಗೌಡ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗಳು ರೋಹಿಣಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಮ್ಮ ತಂದೆಯ ವಿರುದ್ಧ ಪೊಲೀಸರು ಸುಳ್ಳು ಕೇಸ್ ಹಾಕಿದ್ದಾರೆ. ಚಿತ್ರ ಹಿಂಸೆ ಕೊಟ್ಟು ಸಾಯಿಸಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ಒತ್ತಾಯಿಸಿದ್ದಾರೆ.
ಬೆಳಗಾವಿ ಜಿಲ್ಲಾಸ್ಪತ್ರೆಯ ಶವಾಗಾರದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿಣಿ, ನಮ್ಮ ತಂದೆಗೆ ಬಿಪಿ, ಶೂಗರ್ ಸೇರಿ ಯಾವುದೇ ಸಮಸ್ಯೆ ಇರಲಿಲ್ಲ. ನಮ್ಮ ತಂದೆಯ ಕೈಗೆ ಪೊಲೀಸರು ಹಗ್ಗ ಕಟ್ಟಿ, ಚಿತ್ರಹಿಂಸೆ ನೀಡಿ ಸಾಯಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿಯೇ ಅವರು ಮೃತಪಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ನಿನ್ನೆ ಮದ್ಯಾಹ್ನವೇ ತಮ್ಮ ತಂದೆಯನ್ನು ಕರೆದಕೊಂಡು ಹೋಗಿದ್ದಾರೆ. ರಾತ್ರಿ ಫೋನ್ ಮಾಡಿ ತಕ್ಷಣ ಬನ್ನಿ ಎಂದು ಪೊಲೀಸರು ನಮಗೆ ಹೇಳಿದರು. ರಾತ್ರಿ 10ಕ್ಕೆ ಬಂದು ನೋಡಿದಾಗ ತಂದೆ ಬೆಡ್ ಮೇಲೆ ಇದ್ದರು. ವೈದ್ಯರು ಹೇಳಿದರು ಇನ್ನೂ ಡೆತ್ ಆಗಿಲ್ಲ ಅಂದಿದ್ದರು. ತಕ್ಷಣ ನಾನು ಪಲ್ಸ್ ಚೆಕ್ ಮಾಡಿದೆ. ಆದರೆ ಯಾವ ಸ್ಪಂದನೆ ಇರಲಿಲ್ಲ. ನಾನು ಪ್ಯಾರಾಮೆಡಿಕಲ್ ಸ್ಟೂಡೆಂಟ್. ಹಾಗಾಗಿ ಪಲ್ಸ್ ಚೆಕ್ ಮಾಡಿ ನೋಡಿದೆ. ಆಗಲೇ ಪ್ರತಿಕ್ರಿಯೆ ಇರಲಿಲ್ಲ. ಆಮೇಲೆ ವೈದ್ಯರು ನಿಮ್ಮ ತಂದೆ ಇನ್ನಿಲ್ಲ ಎಂದರು. ನಮ್ಮ ಕುಟುಂಬದ ದೀಪ ಆರಿಹೋಗಿದೆ ಎಂದು ಕಣ್ಣೀರಿಟ್ಟಿದ್ದಾರೆ.
ನಾನು, ನಮ್ಮ ಅಣ್ಣ ಇನ್ನೂ ಓದಬೇಕು. ಕೇಸ್ ಇರೋ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನಮ್ಮ ತಂದೆಯ ಜೀವಕ್ಕೆ ನ್ಯಾಯ ಬೇಕು.ಎರಡು ಕೈಗಳ ಮೇಲೆ ಹಗ್ಗ ಕಟ್ಟಿರೋ ಮಾರ್ಕ್ ಇದೆ. ಇದು ಯಾವುದೇ ಹಾರ್ಟ್ ಅಟ್ಯಾಕ್ ಅಲ್ಲವೇ ಅಲ್ಲ. ಲಕ್ಷಣ ಕಂಡು ಬಂದ ತಕ್ಷಣ ಆಸ್ಪತ್ರೆಗೆ ಸೇರಿಸಬೇಕಿತ್ತು ಎಂದು ಪೊಲೀಸರ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿಯವರಿಗೆ ಸರ್ಕಾರದಿಂದ ಕಾಟಾಚಾರಕ್ಕೆ ಕರೆ; ಕಮಲದವರ ಕಣ್ಣಿಗೆ ಕಾಮಾಲೆ ಬಡಿದಿದೆಯಾ ಹೇಗೆ?; JDS ಆಕ್ರೋಶ
https://pragati.taskdun.com/politics/h-d-devegowdakempegowda-statuejdstweet/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ