Latest

ಬ್ಯಾಗ್ ಖರೀದಿಯಲ್ಲಿ 6 ಕೋಟಿ ಕಿಕ್ ಬ್ಯಾಕ್; ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಮೈಸೂರು ಮಾಜಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯಾಗಿದ್ದರೂ ಅವರ ವಿರುದ್ಧದ ಆರೋಪಗಳು ಮುಂದುವರೆದಿದೆ. ಶಾಸಕ ಸಾ.ರಾ.ಮಹೇಶ್, ಇದೀಗ ರೋಹಿಣಿ ವಿರುದ್ಧ ಬ್ಯಾಗ್ ಖರೀದಿಯಲ್ಲಿ 6 ಕೋಟಿ ರೂಪಾಯಿ ಕಿಕ್ ಬ್ಯಾಕ್ ಪಡೆದುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಾ.ರಾ.ಮಹೇಶ್, ಪ್ಲಾಸ್ಟಿಕ್ ಮುಕ್ತ ಯೋಜನೆಯಲ್ಲಿ ರೋಹಿಣಿ ಭಾರಿ ಅಕ್ರಮ ನಡೆಸಿದ್ದು, ಪಾಲಿಕೆ ಕೌನ್ಸಿಲ್ ಒಪ್ಪಿಗೆ ಕೂಡ ಪಡೆಯದೇ ತಾವೊಬ್ಬರೇ ಸುಮಾರು 14,71,458 ಬಟ್ಟೆ ಬ್ಯಾಗ್ ಖರೀದಿಸಿ, ಅಕ್ರಮವೆಸಗಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಗುಡುಗಿದ್ದಾರೆ.

ಜಿಎಸ್ ಟಿ ಸೇರಿ 7.55 ಕೋಟಿ ಮೌಲ್ಯದ ಬಟ್ಟೆ ಬ್ಯಾಗ್ ಇದಾಗಿದ್ದು, ಗುತ್ತಿಗೆದಾರರಿಂದ ಕೈಮಗ್ಗಕ್ಕೆ ಬ್ಯಾಗ್ ಸರಬರಾಜು ಮಾಡಲಾಗಿದೆ. ವಾಸ್ತವವಾಗಿ 1 ಕೋಟಿ 47 ಲಕ್ಷದ 15 ಸಾವಿರ ರೂ. ಆದರೆ ಅವರು 7 ಕೋಟಿ ರೂಪಾಯಿ ಕೊಟ್ಟು ಖರೀದಿಸಿ ಬರಿ ಬ್ಯಾಗ್ ನಲ್ಲೇ 6 ಕೋಟಿ ರೂಪಾಯಿ ಕಿಕ್ ಬ್ಯಾಕ್ ಪಡೆದಿದ್ದಾರೆ. ಈ ಬಗ್ಗೆ ಸಿಎಸ್ ಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇವೆ. ಕ್ರಮಕ್ಕೆ ಮುಂದಾಗದಿದ್ದರೆ ಸಿಎಸ್ ಮನೆ ಮುಂದೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಯುವತಿಗೆ ಚಾಕು ಇರಿತ; ಪಾಗಲ್ ಪ್ರೇಮಿ ಬಂಧನ

ಬೆಳಗಾವಿಯಲ್ಲಿ ಈವರೆಗಿನ ಮತದಾನದ ವಿವರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button