ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಲ್ಲಿಯ ಶಹಾಪುರ ಪೊಲೀಸ್ ಠಾಣೆ ಕಾನಸ್ಟೆಬಲ್ ದುಂಡಯ್ಯ ಮುನವಳ್ಳಿಮಠ (37) ಹೃದಯಾಘಾತದಿಂದ ನಿಧನರಾದರು.
ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದ ದುಂಡಯ್ಯ ಶಿವಲಿಂಗಯ್ಯ ಮುನ್ನವಳ್ಳಿಮಠ ಬುಧವಾರ ಬೆಳಗ್ಗೆ ಹೃದಯಾಘಾತಕ್ಕೆ ಒಳಗಾದರು. ಇಂದು ಮಧ್ಯಾಹ್ನ ಅವರು ಕರ್ತವ್ಯಕ್ಕೆ ತೆರಳಬೇಕಿತ್ತು.
ಕಳೆದ ಎರಡು ವರ್ಷಗಳಿಂದ ಪೇದೆಯಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಮೃತರಿಗೆ ತಂದೆ-ತಾಯಿ, ಐವರು ಸಹೋದರಿಯರು ಇದ್ದಾರೆ.