Kannada NewsKarnataka NewsLatest

*ಬೆಳಗಾವಿಯಲ್ಲಿ ನಾಳೆ ಯಕ್ಷಗಾನ ಪ್ರದರ್ಶನ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕುಂದಾಪುರ ಕೋಣಿ ಶ್ವೇತಛತ್ರ ಯಕ್ಷಮಿತ್ರ(ರಿ), ಇದರ ಯಕ್ಷ ದಿಗ್ಗಜರಿಂದ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ಭೀಷ್ಮ ವಿಜಯ ಯಕ್ಷಗಾನದ ಉಚಿತ ಪ್ರದರ್ಶನ ಜೂನ್ 11 ರಂದು ಸಂಜೆ 5 ಕ್ಕೆ ನಗರದ ಕೋನವಾಳಗಲ್ಲಿಯ ಲೋಕಮಾನ್ಯ ರಂಗ ಮಂದಿರದಲ್ಲಿ ನಡೆಯಲಿದೆ.

ಹಿಮ್ಮೇಳದಲ್ಲಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ರಾಮಚಂದ್ರ ಹೆಗಡೆ ಹಿಲ್ಲೂರು(ಭಾಗವತಿಕೆ), ನವೀನ ಭಂಡಾರಿ ಕಡತೋಕ (ಮದ್ದಳೆ),
ಶ್ರೀನಿವಾಸ ಪ್ರಭು(ಚಂಡೆ), ಶಶಿಕಾಂತ ಶೆಟ್ಟಿ ಕಾರ್ಕಳ, ಸಚಿನ್ ಶೆಟ್ಟಿ ನಾಗರಕೊಡಿಗೆ, ಸಂತೋಷ ಕುಲಾಲ, ಹಳ್ಳಾಡಿ ಜಯರಾಮ ಶೆಟ್ಟಿ,
ಶೇಖರ ಶೆಟ್ಟಿ ಎಳಬೇರು (ಹಾಸ್ಯ) ಹಾಗೂ ಮುಮ್ಮೇಳದ ಕಲಾವಿದರಾಗಿ ಕೃಷ್ಣ ಯಾಜಿ ಬಳ್ಕೂರು, ಜಲವಳ್ಳಿ ವಿದ್ಯಾಧರ ರಾವ್, ತುಂಬ್ರಿ ಭಾಸ್ಕರ ಬಿಲ್ಲವ, ಮಂಕಿ ಈಶ್ವರ ನಾಯ್ಕ, ಹರೀಶ ಜಪ್ತಿ, ಸನ್ಮಯ ಭಟ್ ಮಲವಳ್ಳಿ ಇವರುಗಳು ಭಾಗವಹಿಸಲಿದ್ದಾರೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಬೆಳಗಾವಿಯ ಯಕ್ಷ ಮಿತ್ರರು ಕೋರಿದ್ದಾರೆ.

Home add -Advt

Related Articles

Back to top button